Previous ರೇಣುಕಾಚಾರ್ಯ ಮತ್ತು ಪಂಚಾಚಾರ್ಯರು ಲಿಂಗಾಯತ Next

ಲಿಂಗವಂತ ಮಾನ್ಯತೆ ಭಾರತದ ಅಸ್ಮಿತೆ

✍ ಡಾ: ನಾಗಶೆಟ್ಟಿ ಕಂಟೆಪ್ಪ ಶೆಟಕಾರ

ಲಿಂಗವಂತ ಮಾನ್ಯತೆ ಭಾರತದ ಅಸ್ಮಿತೆ

ಭಾರತ ಭೂಮಿ ಆಸ್ಥಿಕ, ನಾಸ್ಥಿಕ, ತಾತ್ವಿಕ, ಅತ್ಯಧಿಕ ಧರ್ಮಗಳ ಜನನಿ ಮಾತ್ರವಲ್ಲದೇ ವಿದೇಸಿ ದರ್ಮಗಳನ್ನೂ ಕೂಡ ಪೋಷಿಸುವ ತೊಟ್ಟಿಲು. ಬೌದ್ಧ, ಜೈನ, ಸಿಖ್‌ ಧರ್ಮಗಳು ಹಾಗೂ ಅಸಂಖ್ಯಾತ ಧಾರ್ಮಿಕ ಚುಳುವಳಿಗಳು ಈ ನೆಲದಲ್ಲಿ ಜನ್ಮತಳೆದುದಲ್ಲದೇ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಭಾರತ ಸಂಜಾತ ದಯೆ ಕರುಣೆಯ ಬೌದ್ಧ ಧರ್ಮ ರಾಜಾಶ್ರಯದೊಂದಿಗೆ ಬೆಳಗಿತು, ಆದರೆ ಭಾರತದಲ್ಲಿ ಅಪಾಯ ಎದುರಾಯಿತು ಭಿಕ್ಕುಗಳ ಮಾರಣಹೋಮ ನಡೆಯಿತು, ವಿದೇಶಗಳಲ್ಲಿ ಉಳಿದು ಬೆಳೆದು ಏಷಿಯಾ ಖಂಡದಲ್ಲಿಯೇ ಪ್ರಬಲವಾದ ನಂತರ ಭಾರತಕ್ಕೆ ಮರಳುವಂತಾಯಿತು.

ಸಮಾಜದಲ್ಲಿನ ಕೆಲವು ನೂನ್ಯತೆಗಳನ್ನು ಸರಿದೂಗಿಸಲು ಸಮಕಾಲೀನ ಹಲವು ಅವಶ್ಯಕ ಅಂಶಗಳನ್ನು ಮತ್ತು ವಿದೇಶಿ ಧರ್ಮದ ಪ್ರಾರ್ಥನೆ ಅಳವಡಿಸಿಕೊಂಡು ಭಾರತ ಮಾತೆಯ ಸಾಂಸ್ಕೃತಿಕ ಸಂರಕ್ಷಣೆಯ ದೇಶಿಯ ವ್ಯವಸ್ಥೆಯ ರುವಾರಿಯಾಗಿ ಉದಯಿಸಿತು ಸಿಖ್‌ ಧರ್ಮ ಅಪಾರ ಕುತಂತ್ರಗಳನ್ನೆ ಎದುರಿಸಿ ತ್ಯಾಗ ಬಲಿದಾನಗಳಿಂದ ಅಸ್ಥಿತ್ವನ್ನು ಗಳಿಸಿಕೊಂಡಿದೆ ಹುಮ್ಮಸ್ಸಿನ ಭಾರತೀಯ ಸಂಜಾತ ಧರ್ಮ ಸಿಖ ಧರ್ಮ.

ಆರ್ಯ ಸಮಾಜ, ಬ್ಯಹ್ಮ ಸಮಾಜ, ಶಿವಾಜಿ ಮಹಾರಾಜ, ಭಕ್ತಿ ಪಂಥಗಳು, ದಾಸ ಪರಂಪರೆ, ಸಹಸ್ರ ಸಹಸ್ರ ಧಾರ್ಮಿಕ ಆದ್ಯಾತ್ಮಿಕ ಸಾಮಾಜಿಕ ಚಳುವಳಿಗಳನ್ನು ಹುಟ್ಟು ಹಾಕಿದೆ ಭಾರತದ ನೆಲ.

ವಿದೇಶಿ ನೆಲೆಯ ಕ್ರಿಶ್ಚಿಯನ್‌ ಹಾಗೂ ಇಸ್ಲಾಂ ಧರ್ಮಗಳೂ ಕೂಡ ಭಾರತದಲ್ಲಿ ಸ್ಥಿರವಾಗಿ ನೆಲೆಯೂರಿವೆ ಮಾತ್ರವಲ್ಲದೇ ಬೆಳೆಯುತ್ತಲೂ ಇವೆ.

ಈ ನೆಲದ ಕೆಲ ಕಷ್ಟಕರ/ಅನಿಷ್ಟ ಆಚರಣೆ ಹಾಗೂ ಧಾರ್ಮಿಕ ನಂಬಿಕೆಗಳೇ ಬಹುಸಂಖ್ಯೆಯ ತಾತ್ವಿಕತೆಗಳ ಉಗಮಕ್ಕೆ, ವಿದೇಶಿ ಧರ್ಮಗಳ ಪೋಷಣೆಗೆ ನಾಂದಿಯಾಗಿರುವುದು ಸುಸ್ಪಷ್ಟ.

ಸಾಮಾಜಿಕ ಜೀವಿ ಮಾನವ ಸಮುದಾಯಲ್ಲಿ ಮಾನವರಲ್ಲಿಯ ಮೇಲುಕೀಳು, ವೈರುದ್ಧ ಹಾಗೂ ಅನಿಷ್ಠತೆ, ಅಸಹನೆ ಹಾಗೂ ಇತರ ಕಷ್ಟಗಳಿಗೆ ಪರಿಹಾರವಾಗಿ ಜನ್ಮತಳೆದ ಆಡು ಭಾಷೆಯ ಲಿಂಗವಂತ, ಗ್ರಾಂಥಿಕದ ಲಿಂಗಾಯತ ಭಾರತ ಮಾತೆಯ ಅಕ್ಕರೆಯ ಕಂದ. ಕನ್ನಡದ ಹೆಮ್ಮೆಯನ್ನು ಅಗಣೀತ ಮಟ್ಟದಲ್ಲಿ ವೃದ್ಧಿಸಿದ ಜಾಗತಿಕ ಧರ್ಮ. ವಿಶ್ವಗುರು ಬಸವಣ್ಣನವರ ಬಹುಮುಖ ವೈಚಾರಿಕತೆ ಜೀವ ಸಂಕುಲದ ಒಳಿತ ಕೇಂದ್ರೀಕರಿಸಿದ ಅಪ್ಪಟ ದೇಶೀ ಸಮುದಾಯಿಕ ಸಿದ್ದಾಂತವೇ ಲಿಂಗಾಯತ.

ಭಾರತ ಮಾತೆಯ ಚಿದ್ಗರ್ಭದಲ್ಲಿ ಉದಯಿಸಿದ ಲಿಂಗಾಯತ ಮಾನವೀಯತೆಯನ್ನು ಪರಿಶುದ್ಧ ಜ್ಞಾನವನ್ನು ಸಂಕೇತಿಸುವ ವಿಚಾರಧಾರೆಯಾಗಿದೆ. ಮಾನವರಲ್ಲಿ ಅಸ್ಪ್ರತೆಯ ನಿರ್ಮಾಣದಂತ ದುಷ್ಟನಡೆಯ ಬೇರು ಸಮೇತ ಕಿತ್ತೆಸೆದ ಮೌನಕ್ರಾಂತಿಯೇ ಕಲ್ಯಾಣ ಕ್ರಾಂತಿ. ಜ್ಞಾನ, ಆಚಾರ, ವಿಚಾರ, ಸರ್ವಾಂಗೀಣ ಕ್ರಾತಿಯ ಕಿಡಿಯನ್ನು ನಂದಿಸಲು ಸಂಪ್ರದಾಯವಾದಿಗಳು ಹಿಂಸಾಚಾರಕ್ಕೆ ಪ್ರಚೋದಿಸಿ ಸಾತ್ವಿಕ ಶಕ್ತಿ ಅಡಗಿಸುವ ಹುನ್ನಾರ ನಡೆಸಿತು, ಆದರೆ, ವಿದ್ರೋಹ ಎಸಗದೆ, ಹಿಂಸಾಚಾರಕ್ಕೆ ಮೋದಲಾಗದೇ ವಿಜಯಶಾಲಿಯಾದ ಏಕಮಾತ್ರ ಕ್ರಾಂತಿ ಎಂಬ ಅಗ್ಗಳಿಕೆ ಪಡೆಯಿತು ಬಸವಕಲ್ಯಾಣದ ಕ್ರಾಂತಿ. ವಚನ ಸಾಹಿತ್ಯ ರಕ್ಷಣೆಯ ಮೂಲಕ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿತು ಲಿಂಗವಂತ ಧರ್ಮ. ಶಾಂತ ಚಿತ್ತದ ಮಾನವೀಯ ಮನಸ್ಸಿನ ಪ್ರತಿಯೊಬ್ಬ ಜೀವಿಗೂ ಪ್ರಸ್ತುತ ಲಿಂಗಾಯತ ತತ್ವಸಿದ್ದಾಂತ.

ಬಸವಾದಿ ಶರಣರ/ಬಸವಣ್ಣವರ ಲಿಂಗಾಯತದ ವೈಶಿಷ್ಠ್ಯಗಳು;

  1. ನಿರಾಕಾರ ನಿರ್ಗುಣ ದೇವರ ಕುರುಹು ಇಷ್ಟಲಿಂಗವನ್ನು ಸ್ವಇಛ್ಚೆಯಿಂದ ಆಯತ(ಅಳವಡಿಕೆ) ಮಾಡಿಕೊಂಡವನು ಲಿಂಗ+ಆಯತ=ಲಿಂಗವಂತ/ಲಿಂಗಾಯತ
  2. ಸೃಸ್ಷಿಕರ್ತ (ಸೃಷ್ಟಿ, ಸ್ಥಿತಿ, ಲಯಗಳ ನಿರ್ವಾಹಕ) ದೇವರಲ್ಲಿ ಅಪಾರ ಶ್ರಧ್ದೆಯನ್ನು ಹೊಂದಿರುವ ಅಪ್ಪಟ ಆಸ್ಥಿಕ ಧರ್ಮ.
  3. ದೇವರ ಕಲ್ಪನೆಯೊಂದಿಗೆ ಸಮ್ಮಿಳಿತವಾಗಿರುವ ಅಂಧಶ್ರದ್ಧೆ ಮೂಡಾಚಾರಣೆ, ದೇವತಾ ಉಪಾಸನೆ, ಸ್ವರ್ಗ ನರಕ ಅಲ್ಲಗಳೆದ ಅಪ್ಪಟ ವೈಜ್ಞಾಕ ವಿಚಾರ ಹಾಗೂ ಆಚಾರದ ಪ್ರಾಯೋಗಿಕ ರೂಪ ಲಿಂಗವಂತ ಧರ್ಮ.
  4. ಪಂಚಭೂತಗಳ, ದೇವತೆಗಳ, ಕಷ್ಟ ನಷ್ಟಗಳ ಬಗೆಗಿನ ಭಯವನ್ನು ಬಿಡಿಸಿ ಆತ್ಮಸ್ಥೈರ್ಯ, ಆತ್ಮಗೌರವಗಳ ಅಭಯ ಕರುಣಿಸುವ ಲಿಂಗವಂತ ತತ್ವ.
  5. ಸಮಷ್ಠಿ ಚಿಂತನೆ, ಸಮುದಾಯ ನಿರ್ವಹಣೆ ಹಾಗೂ ವೈಯಕ್ತಿಕ ಆಚಾರ ವಿಚಾರಗಳಿಗೆ ವೇದಿಕೆ ಅನುಭವ ಮಂಟಪ ಕಲ್ಪಿಸಿದ ಪ್ರಜಾಪ್ರಭುತ್ವ ಜನಕ ಲಿಂಗಾಯತ.
  6. ಜ್ಞಾನ ಸಹಸ್ರಮುಖದ, ಪರಿಮೂರ್ಣತೆಯ ದಾಖಲೆ ದಾಖಲೆಯೇ ವಚನ.
  7. ಸೃಷ್ಟೀಯ ಸಮಪಾಲು ಮಹಿಳಾ ಕುಲದ ಅವಹೇಳನ ಕಳೆದು ಮಾನವೀಯತೆ ಮರು ಸೃಷ್ಟಿ ನಡೆಸಿಕೊಟ್ಟ ಪ್ರಥಮ ತತ್ವಶಾಸ್ತೃವೇ ಲಿಂಗಾಯತ.
  8. ಬಸವಣ್ಣ ದೀನ ದುಃಖಿತರೊಂದಿಗೆ ತನ್ನ ತಾ ಗುರುತಿಸಿಕೊಂಡರುನ (ಅಪ್ಪನು ನಮ್ಮ ಮಾದಾರ ಚೆನ್ನಯ್ಯ………..).
  9. ಸರ್ವ ವಿಧದ ಉತ್ಪಾದನಾ ಕಾಯಕ ಜೀವಿಗಳನ್ನು ಅಪ್ಪಿಕೊಂಡವರು.
  10. ಆಲಸ್ಯ, ಪರಾವಲಂಭನೆ, ಮೋಸದ ಗಳಿಕೆ, ವಂಚನೆ ಹಾಗೂ ಇತ್ಯಾದಿ ಅನಾಚಾರಗಳನ್ನು ನಿರ್ನಾಮ ಗೊಳಿಸಿದ ಪ್ರವಾದಿ.
  11. ಕಲ್ಯಾಣ ಕ್ರಾಂತಿ ಮಾನವೀಯತೆಯ ವೈರಿಗಳಿಂದ ಹೃಯದವಂತಿಕೆಯ ರಕ್ಷೆಣೆಗಾಗಿ ನಡೆಯಿತು.
  12. ವಿಜ್ಞಾನ, ಕಲೆ, ಸಾಹಿತ್ಯ, ಅರ್ಥಶಾಸ್ತ್ರ, ಭೂಗೋಳ, ಸಂಗೀತ, ನಾಟ್ಯ, ಹಾಸ್ಯ, ಜೀವಶಾಸ್ತ್ರ, ವೈದ್ಯಕೀಯ, ತಾಂತ್ರಿಕ, ಅದ್ಯಾತ್ಮ, ಇನ್ನೂ ಅನೇಕ ಅಸಂಖ್ಯ ವಿದ್ಯೆಗಳ ಪ್ರಾವಿಣ್ಯತೆ ಮಾತ್ರವಲ್ಲದೇ ಸಂಶೋಧನೆ ನಡೆಸಬಲ್ಲ ಶರಣ ಸಮುದಾಯ ಸಂಕುಲವನ್ನೇ ನಿರ್ಮಿಸಿತು ಅನುಭವ ಮಂಟಪ.
  13. ಅಷ್ಟಾವರಣ, ಪಂಚಾಚಾರ, ಷಟ್‌ ಸ್ಥಲ, ವಚನ ಸಾಹಿತ್ಯ, ಅನುಭವ ಮಂಟಪ, ಕಾಯಕ ದಾಸೋಹ ಇತ್ಯಾದಿಗಳು ಹೊಚ್ಚಹೊಸ ಅವಿಷ್ಕಾರಗಳೆಂದು ಸಾಂವೈಧಾನಿಕ ಸಂಸ್ಥೆ ಮುಂಬೈ ವಿಶ್ವವಿದ್ಯಾನಿಲಯ ಮನ್ನಣೆ ನೀಡಿದೆ. ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದೆ.
  14. ತಲೆತಲಾಂತರಗಳಿಂದ ರಕ್ತಗತವಾಗಿ ಬಂದಿರುವ ಲಿಂಗವಂತ ಅನುಯಾಯಿಗಳ ವಿಶಿಷ್ಠ ಆಚರಣೆಗಳು ಉದಾಹರಣೆಗಾಗಿ ಕಾಯಕ ದಾಸೋಹ ನಿಜಾಚರಣೆ, ಪ್ರತಿ ಕುಟುಂಬದಲ್ಲಿ ಬಸವಣ್ಣ ಅಕ್ಕಮಹಾದೇವಿ ಇನ್ನಿತರ ಶರಣ ಹೆಸರಿಟ್ಟು ಆದ್ಯರ ನೆನೆವುದು, ಪ್ರತಿಯೊಬ್ಬರ ನೊಸಲ ವಿಭೂತಿ ಧಾರಣೆ, ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದು, ಕಡ್ಡಾಯವಾಗಿ ದೀಕ್ಷೆ ಪಡೆದುಕೊಳ್ಳುವುದು, ಇತ್ಯಾದಿಗಳನ್ನು ರೂಡಿಗತವಾಗಿಸಿಕೊಂಡ ಜೀವಂತ ಸಮಾಜ.

ಭಾರತೀಯ ನೆಲ ಮೂಲದಿಂದಲೇ ಜನ್ಮತಳೆದಿರುವ ಲಿಂಗವಂತ ಧರ್ಮದ ಉಳಿವು, ಬೆಳೆವು ಪ್ರತಿಯೊಂದು ಭಾರತ ಮಾತೆಯ ಹೆಮ್ಮೆಯೇ ಸರಿ, ರಾಷ್ಟ್ರೀಯತೆಗೆ ಪೂರಕವೇ ಸರಿ.

ವಿಶ್ವ ಮಾನವತೆಯ ವೈಜ್ಞಾನಿಕ ದೇಸಿ ಸಂಸ್ಕೃತಿಯ ಲಿಂಗಾಯತ ಧರ್ಮ ಭಾರತ ದೇಶದಲ್ಲಿಯೇ ಪರಿಚಯವಾಗದಿರುವುದು ಬಹುದೊಡ್ಡ ಪ್ರಮಾದವಲ್ಲದೇ ಮತ್ತಿನ್ನೇನು? ಲಿಂಗವಂತ ಧರ್ಮ ತತ್ವ ಸಿದ್ದಾಂತಗಳ ಪರಿಚಯ ಪಕ್ಕದ ರಾಜ್ಯಗಳಿಗೆ ಮಾಡಿಸಿದಲ್ಲಿ ಯಾರೀಗೇತರ ನಷ್ಠ? ದಕ್ಷಿಣದ 4-5 ರಾಜ್ಯಗಳಲ್ಲಿಯ ಲಿಂಗವಂತರ ವಿಶಿಷ್ಠ ಅಸ್ಥಿತ್ವದ ಪರಿಚಯ ಭಾರತ ಮಾತೆಯ ಹಿರಿಮೆಯೋ? ಅಥವಾ ಗರಿಮೆಯೋ? ಈ ವಿಷಯವೇ ಇಂದು ಲಿಂಗಾಯತದ ಮುಂದಿರುವ ಬಹುದೊಡ್ಡ ಪ್ರಶ್ನೆ ಎಂಬುದಂತು ನೂರಕ್ಕೆ ನೂರು ದಿಟ. ಭಾರತ ಮಾತೆಯ ಹೆಮ್ಮೆ ಅಸ್ಥಿತ್ವದ ಪರಿಚಯಿಸುವ ಲಿಂಗಾಯತ ಮಾನ್ಯತೆಗೆ ಒಳಸಂಚುಗಳ ಪೆಟ್ಟು, ಯಾರಿಗೆ ಮಾಡುತ್ತಿರುವ ಅಪಚಾರ? ಲಿಂಗಾಯತ ಮಾನ್ಯವಾದಲ್ಲಿ ಭಾರತದ ರಾಷ್ಟ್ರೀಯತೆಗೆ ಯಾವ ರೀತಿಯ ಧಕ್ಕೆ?

ಭಾರತ ರಾಷ್ಟ್ರದಲ್ಲಿ ಜನಿಸಿ, ಉಳಿದು, ಬೇಳೆದು ಇಲ್ಲಿಯೇ ಲಿಂಗೈಕ್ಯವಾಗುವು ಲಿಂಗಾಯತದ/ರ ತಪ್ಪೇ? ಪ್ರಜಾಪ್ರುಭುತ್ವ ರಾಷ್ಟ್ರದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯು ಒಂದು ಸಮುದಾಯಕ್ಕೆ ಇಂಥ ಹಕ್ಕು ಕರುಣಿಸದೇ? ಲಿಂಗಾಯತಕ್ಕೆ ಗಂಡಾಂತರಗಳ ಗುಂಡುಕಲ್ಲುಗಳೇ ಮೇಲೆರಗಿವೆ ಎರಗುತ್ತಿವೆ ಏಕೆ? ಉತ್ತರ ಹುಡುಕುವುದು ಅಪರಾಧವೇ?

ಲಿಂಗಾಯತ ಮಾನ್ಯತೆ ಒಳಸಂಚು, ವಿರೋಧ, ಕುತಂತ್ರ ಇತರೆಗಳು ಮಾನವೀಯತೆ/ಸಂವಿಧಾನ ಮಾತ್ರವಲ್ಲದೇ ಭಾರತ ರಾಷ್ಟ್ರ ದ್ರೋಹವೇ ಸರಿ!

ರಾಜಶಾಹಿ ಆಡಳಿತದಲ್ಲಿ ಕುತಂತ್ರದ ನಿಗ್ರಹವನ್ನು ಮೀರಿ ಉಳಿದು ಬಂದಿರುವ ಲಿಂಗಾಯತ ತತ್ವಸಿದ್ದಾಂತಗಳನ್ನು ಹತ್ತಿಕ್ಕುವುದು ಇಂದಿನ ಜಾಗ್ರತ ಲಿಂಗವಂತ ಸಮುದಾಯ ಹಾಗೂ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ವಾಸ್ತವದಲ್ಲಿ ಸಾಧ್ಯವೇ ??

ಲಿಂಗಾಯತ ಮಾನ್ಯತೆಗೆ ಒಳಸಂಚು, ವಿರೋಧ, ಕುತಂತ್ರ ಇತರೆಗಳು ಖಂಡಿತ ಮುಖಭಂಗವನ್ನೇ ಸಾಧಿಸಲಿವೆ, ಭಾರತಮಾತೆಯ ಅಕ್ಕರೆಯ ಲಿಂಗವಂತ ನಿಸ್ಸಂದೇಹವಾಗಿ ವಿಶ್ವವನ್ನು ಬೆಳಗಲಿದೆ. ಲಿಂಗವಂತರು ಅಸಂಭದ್ದ ಭ್ರಮೆಯಿಂದ ಹೊರಬಂದು ಮುನ್ನಡೆಯಬೇಕಾದುದೇ ಸರಿಯಾದ ದಾರಿ.

ಲೇಖಕರ ವಿಳಾಸ:

ಡಾ: ನಾಗಶೆಟ್ಟಿ ಕಂಟೆಪ್ಪ ಶೆಟಕಾರ, #9-9-94/2,
ವಿಭಿನ್ನ ಚಿಂತನ, ಶರಣಸಂಗಮ ತಿರುವು, ಆಕ್ಕಮಹಾದೇವಿ ಕಾಲೋನಿ,
ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯ ಹತ್ತಿರ, ಗಾಂಧಿಗಂಜ ಅಂಚೆ,
ಬೀದರ 585403, ಜಂಗಮವಾಣಿ 9341246092,
ಮಿಚಂಚೆ: universalizelingayat@gmail.com

ಪರಿವಿಡಿ (index)
Previous ರೇಣುಕಾಚಾರ್ಯ ಮತ್ತು ಪಂಚಾಚಾರ್ಯರು ಲಿಂಗಾಯತ Next