ವೀರಶೈವ ಮತ್ತು ಲಿಂಗಾಯತ ಬೇರೆ
        
            ವೀರಶೈವ ಎಂಬುದು ಲಿಂಗವಂತನಾಗುವುದಕ್ಕಿಂತ ಮುಂಚಿನ ಒಂದು ಹಂತ (Stage),
         ಅಚಾರ/ವ್ರತ ಅಥವಾ ಒಂದು ಮತ ಅಂದರೆ ವೀರಶೈವ ಮತ್ತು ಲಿಂಗಾಯತ ಬೇರೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ.
        
        
        ಅಂಗಲಿಂಗಸಂಗಸುಖಸಾರಾಯದನುಭಾವ        
        
        
ಲಿಂಗವಂತಂಗಲ್ಲದೆ ಸಾಧ್ಯವಾಗದು ನೋಡಾ.        
        
        ಏಕಲಿಂಗಪರಿಗ್ರಾಹಕನಾದ ಬಳಿಕ,        
        
        ಆ ಲಿಂಗನಿಷ್ಠೆ ಗಟ್ಟಿಗೊಂಡು,        
        
        ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ,        
        
        
ವೀರಶೈವಸಂಪನ್ನನೆನಿಸಿ 
ಲಿಂಗವಂತನಾದ ಬಳಿಕ        
        
        ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯನುಳ್ಳ
        ಭವಿಶೈವದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ
        ಮನದಲ್ಲಿ ನೆನೆ[ಯ]ಲಿಲ್ಲ, ಮಾಡಲೆಂತೂ ಬಾರದು.        
        
        ಇಷ್ಟೂ ಗುಣವಳವಟ್ಟಿತ್ತಾದಡೆ        
        
        ಆತನೀಗ ಏಕಲಿಂಗನಿಷ್ಠಾಚಾರಯುಕ್ತನಾದ        
        
        ವೀರಮಾಹೇಶ್ವರನು.        
        
        ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ        
        
        ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ        
        
        
ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ,        
        
        ಕೂಡಲಸಂಗಮದೇವಾ. -೧/೯೬೬ 
[1]
        
        ಲಿಂಗೈಕ್ಯ 
ಲಿಂಗವಂತ ಲಿಂಗಪ್ರಾಣಿ ಪ್ರಾಣಲಿಂಗಿಗಳೆಂದೆನಬಹುದು.
        ಉದಯಕಾಲ ಮಧ್ಯಾಹ್ನ ಕಾಲ ವಿಚಿತ್ರಕಾಲ ತ್ರಿಕಾಲ
        ಲಿಂಗಾರ್ಚಕರೆಂದೆನಬಹುದು, ಎನಬಹುದು.
        ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೋರಿದ
        ನಿಷ್ಪೃಹರೆಂದೆನಬುಹುದು, ಎನಬಹುದು.
        ಧಾರಣೆ ಪಾರಣೆ ಒಡಲ ದಂಡಣೆ ಕರಣ ದಂಡಣೆ
        ಉಳ್ಳವರೆಂದೆನಬಹುದು.
        ಶೀಲವಂತರು ಸಂಬಂಧಿಗಳು ಒರತೆಯಗ್ಘ[ವ]ಣಿಯ
        ನೇಮಿಗಳೆಂದೆನಬುಹು, ಎನಬಹುದು.
        ನೇಮ ವ್ರತ ಪಾಕದ್ರವ್ಯವ ಒಲ್ಲೆವೆಂದೆನಬಹುದು, ಎನಬಹುದು.
        ಶುದ್ಧಶೈವ ಪೂರ್ವಶೈವ 
ವೀರಶೈವವೆಂದೆನಬುಹುದು, ಎನಬಹುದು.
        ಸರವೇದಿಗಳು ಶಬ್ದವೇದಿಗಳು
        ಮಹಾನುಭಾವಿಗಳೆಂದೆನಬಹುದು, ಎನಬಹುದು.
        ಇಂತಿವರೆಲ್ಲರೂ
        ಶಿವಪಥದೊಳಗೆ ಮಾಡುತ್ತ ಆಡುತ್ತ ಇದ್ದರಲ್ಲದೆ
        ಒಂದರ ಕುಳವು ತಿಳಿಯದು ನೋಡಾ.
        ಆ ಒಂದು ದಾಸೋಹದಲ್ಲಿ ಬಸವಣ್ಣ ಸ್ವತಂತ್ರ.
        ಆ ಲಿಂಗವು ಬಸವಣ್ಣನ ಒಡನೊಡನೆ ಆಡುತಿರ್ದನು ನೋಡಾ ಕಲಿದೇವರದೇವ. - ಮಡಿವಾಳ ಮಾಚಿದೇವ /೭೨೪ 
[1]
        
        ಪರುಷವ ತಂದು ಕಬ್ಬುನಕ್ಕೆ ಮುಟ್ಟಿಸಲು        
        
        ಚಿನ್ನವಪ್ಪುದಲ್ಲದೆ ಪರುಷವಾಗಬಲ್ಲುದೆ ?        
        
        ಈ ಲೋಕದ ಮನುಜರು ಶಿವಲಿಂಗವ ಕಟ್ಟಿದರೇನು,        
        
        
ಲಿಂಗವಂತರಲ್ಲದೆ ಪ್ರಾಣಲಿಂಗಸಂಬಂದಿಗಳಾಗಬಲ್ಲರೆ ?        
        
        ಶರಣ ಆವ ಕುಲದಲ್ಲಿ ಹುಟ್ಟಿದರೇನು ಆತನು,        
        
        ಆಚಾರ 
ವೀರಶೈವಸಂಪನ್ನಸಿದ್ಧಾಂತ        
        
        ಕ್ರಿಯಾ ಜ್ಞಾನ ಅನುಭಾವಯುಕ್ತವಾದ ಪ್ರಾಣಲಿಂಗಸಂಪನ್ನ.        
        
        ಆದಿ ಅನಾದಿಯಿಲ್ಲದಂದಿನ ನಿಃಕಲ ನಿಶ್ಶೂನ್ಯ ನಿರ್ಭೆದ್ಯ        
        
        ನಿರಾಳ ನಿರಂಜನ ಪರಾತ್ಪರತರನು ತಾನೆ ನೋಡಾ.        
        
        ಅಂತಪ್ಪ ಮಹಾತ್ಮನ ಕುಲಜನಕುಲಜನೆಂದು ಸಂದೇಹ ಸಂಕಲ್ಪದಿಂದ ದೂಷಿಸಿ        
        
        ಜರೆವ ದುರಾಚಾರಿ[ಗಳ] ಬಾಯಲ್ಲಿ        
        
        ಬಾಲಹುಳ ಸುರಿಯದೆ ಮಾಣ್ಬುದೆ ಗುಹೇಶ್ವರಾ. -೨/೧೩೪೭
[1]
     
    [1] ಈ ತರಹದ ಸಂಖ್ಯೆಯ ವಿವರ: ಸವಸ-1/653 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-1653 (೧೫ ಸಮಗ್ರ          ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)