ಲಿಂಗವಂತರು ನಾವು ಅಂಜಲದೇಕೆ? ಮಹಾಧೀರ ಶರಣನಂಜ ಕೂಡಲಸಂಗನ ಶರಣ ನಿರ್ಭಯ.
            ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ.
            ಲೋಕವಿರೋಧಿ: ಶರಣನಾರಿಗಂಜುವನಲ್ಲ,
            ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ. - ಬಸವಣ್ಣ ಸವಸ-1/754 
[1]
            
            ನಾನೊಂದು ಕಾರಣಕ್ಕೆ ಮರ್ತ್ಯಕ್ಕೆ ಬಂದೆನು,
            ಬಂದ ಬಳಲಿಕೆಯ ಪರಿಹರಿಸಲಿಕ್ಕೆ ಚೆನ್ನಬಸವಣ್ಣ ಬಂದನು,
            ಇನ್ನು ಬಾರದಂತೆ ಪ್ರಭುದೇವರು ಬಂದರು,
            ಇದಕ್ಕೆ ಆಜ್ಞಾಕರ್ತೃ ಮಡಿವಾಳ ಮಾಚಿತಂದೆ ಬಂದರು,
            ನಾನಿನ್ನಾರಿಗಂಜೆನು, ಬದುಕಿದೆನು
            ಕಾಣಾ ಕೂಡಲಸಂಗಮದೇವಾ. - ಬಸವಣ್ಣ ಸವಸ-1/1243 
[1]
            
            ಲಿಂಗವಶದಿಂದ ಬಂದ ನಡೆಗಳು,
            ಲಿಂಗವಶದಿಂದ ಬಂದ ನುಡಿಗಳು
            ಲಿಂಗವಂತರು ನಾವು ಅಂಜಲದೇಕೆ?
            ಲಿಂಗವಿರಿಸಿದಂತಿಪ್ಪುದಲ್ಲದೆ,
            ಕೂಡಲಸಂಗಮದೇವಾ ಭಕ್ತರಭಿಮಾನ ತನ್ನದೆಂಬೆನಾಗಿ. - ಬಸವಣ್ಣ ಸವಸ1/686
[1]
            
            ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ        
            
            ಕೇಳಿರಯ್ಯಾ. ಎರಡಾಳಿನ ಭಾಷೆಯ        
            
            ಕೊಲುವೆನೆಂಬ ಭಾಷೆ ದೇವನದಾದರೆ
            ಗೆಲುವೆನೆಂಬ ಭಾಷೆ ಭಕ್ತನದು !
            ಸತ್ಯವೆಂಬ ಕೂರಲಗನೆ ತಳೆದುಕೊಂಡು        
            
            ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ. --ಬಸವಣ್ಣನವರು        
            
            
            ಜಂಬೂದ್ವೀಪ ಸಹಿತವಾಗಿ ನವಖಂಡದ ಪೃಥ್ವಿಯ ಜನರಲ್ಲ ಗಮನವಿಟ್ಟು ಕೇಳಿರಿ. ಇಬ್ಬರ ಮಧ್ಯದ ಹೋರಾಟವನ್ನು         ಭಕ್ತನನ್ನು ಕೊಲ್ಲುವೆ, ಹುಮ್ಮೆಟ್ಟಿಸುವೆ ಎಂಬ ಛಲ ಭಕ್ತನದು. ಅಂತಿಮವಾಗಿ ಗೆಲ್ಲುವರಾರು ಗೊತ್ತೆ         ? ಸದ್ಭಕ್ತರೆ ! ಏಕೆಂದರೆ ಪರಮಾತ್ಮನು ನಿರಾಯಧನು ! ಭಕ್ತನ ಕೈಯಲ್ಲೊ ಸತ್ಯ ಎಂಬ ಕೂರಲಗು ಇದೆ.        
            
            
            ಸಂಸಾರವೆಂಬಡವಿಯಲ್ಲಿ ಹುಲಿಯುಂಟು ಕರಡಿಯುಂಟು
            ಶರಣನಂಜನಂಜ, ಮಹಾಧೀರ ಶರಣನಂಜನಂಜ
            ಕೂಡಲಸಂಗನ ಶರಣರಿಗೆ ನಿರ್ಭಯ.
        
 
    [1] ಈ ತರಹದ ಸಂಖ್ಯೆಯ ವಿವರ: ಸವಸ-1/754 :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-754 (೧೫ ಸಮಗ್ರ         ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)