ಲಿಂಗಾಯತರಲ್ಲಿ ದೇಹವೇ ದೇವಾಲಯ
                 | 
                
                    
                 | 
            
        
    
    *
    
        
            ಉಳ್ಳವರು ಶಿವಾಲಯ ಮಾಡಿಹರು,
            ನಾನೇನ ಮಾಡಲಿ ಬಡವನಯ್ಯಾ
        
        ಉಳ್ಳವರು ಶಿವಾಲಯ ಮಾಡಿಹರು,
        ನಾನೇನ ಮಾಡಲಿ ಬಡವನಯ್ಯಾ,
        ಎನ್ನ ಕಾಲೇ ಕಂಬ, ದೇಹವೇ ದೇಗುಲ,
        ಶಿರವೆ ಹೊನ್ನ ಕಲಶವಯ್ಯಾ,
        ಕೂಡಲಸಂಗಮದೇವಾ, ಕೇಳಯ್ಯಾ
        
        ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. - ಬಸವಣ್ಣ ಸವಸ1/821
        
        ಕಲ್ಲ ಮನೆಯ ಮಾಡಿ
        ಕಲ್ಲ ದೇವರ ಮಾಡಿ
        ಆ ಕಲ್ಲು ಕಲ್ಲ ಮೇಲೆ ಕೆಡೆದರೆ
        ದೇವರೆತ್ತ ಹೋದರೋ
        ಲಿಂಗ ಪ್ರತಿಷ್ಠೆಯ ಮಾಡಿದವಂಗೆ
        ನಾಯಕ ನರಕ ಗುಹೇಶ್ವರ - ಅಲ್ಲಮಪ್ರಭು
        
        ದೇಹವೇ ದೇವಾಲಯವಾಗಿದ್ದ ಮೇಲೆ
        ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
        ಏನ ಹೇಳುವೆನಯ್ಯ?
        ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು? - ಅಲ್ಲಮಪ್ರಭು
        
        ಮನುಷ್ಯರನ್ನು ದೇವರು ಕಾಪಾಡುತ್ತಾನೆನ್ನುವರು ಜನ! ಇನ್ನು ಕಾಪಾಡುವ ದೇವರೆ ಕಲ್ಲಾದರೆ ಆರಾಧಿಸುವ         ಭಕ್ತನೇನಾದಾನು?
    
    
    *