Previous ಬಿಜನಳ್ಳಿ ಎಣ್ಣೆ ಹೊಳೆ Next

ಇಂಗಳೇಶ್ವರ

ಗುರು ಬಸವಣ್ಣನವರ ತಾಯಿಯ ತವರೂರು ಇಂಗಳೇಶ್ವರವಾಗಿದ್ದು, ಬಸವಣ್ಣನವರ ಜನನವು ಇದೇ ಗ್ರಾಮದಲ್ಲಿ ಆಗಿತ್ತು. ಬಸವಣ್ಣನವರ ಪೂರ್ವಜರು ಈಗಲೂ ಇಂಗಳೇಶ್ವರದಲ್ಲೇ ವಾಸಿಸುತ್ತಿದ್ದಾರೆ. ಇದು ಇಂದಿಗೂ ಕುಗ್ರಾಮವಾಗಿ ಉಳಿದು ಕೊಂಡಿದ್ದು ಅಭಿವೃದ್ದಿಯಲ್ಲಿ ತೀರಾಹಿಂದುಳಿದಿದೆ. ಗಡಿ ಪ್ರದೇಶದ ಈ ಹಳ್ಳಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ

ಇಂಗಳೇಶ್ವರವು ಒಂದು ಐತಿಹಾಸಿಕವಾದ ಅಗ್ರಹಾರವಾಗಿತ್ತು. ಅದು ಹಲವಾರು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಇಂಗಳೇಶ್ವರವು ಅಕ್ಕನಾಗಮ್ಮ, ಚೆನ್ನಬಸವಣ್ಣ, ಬಲದೇವ ಮೊದಲಾದ ಶರಣರ ಜನಿಸಿದ ನಾಡು. ಇತ್ತೀಚೆಗೆ ಇಂಗಳೇಶ್ವರದಲ್ಲಿ ಕೂಡಲಸಂಗಮ ಅಭಿವೃದ್ದಿ ಮಂಡಳಿಯಿಂದ ಬಸವೇಶ್ವರ ದೇವಸ್ಥಾನ, ಮಾದಲಾಂಬಿಕೆ ಭವನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದಲ್ಲದೆ ‘ಬಸವಣ್ಣವರು ಹುಟ್ಟಿದ ಮನೆಯು ಸ್ಮಾರಕವಾಗಿ ನಿರ್ಮಾಣವಾಗುತ್ತಿದೆ.

ಇಂಗಳೇಶ್ವರದಲ್ಲಿ ನೂತನವಾಗಿ “ವಚನ ಶಿಲಾ ಮಂಟಪ”ವನ್ನು ನಿರ್ಮಿಸಲಾಗಿದೆ. ಇಲ್ಲಿ ಬಸವಾದಿ ಶರಣರ ಸುಮಾರು ೪೩,೦೦೦ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇದರಿಂದಾಗಿ ವಚನಗಳ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಬರಲು ಸಹಾಯಕವಾಗಿದೆ.

ಪ್ರೇಕ್ಷಣೀಯ ಸ್ಥಳ: ಅಕ್ಕನಾಗಮ್ಮನವರ ಗವಿಯು ಇಂಗಳೇಶ್ವರದಿಂದ ಸುಮಾರು ೨ ಕಿ.ಮೀ. ದೂರದಲ್ಲಿದೆ. ಚಂದ್ರಪ್ರಭಾ ಅರಸರ ಕಾಲದಲ್ಲಿ ನಿರ್ಮಾಣಗೊಂಡ ೫-೬ ದೇವಾಲಯಗಳಿವೆ.

ಇಂಗಳೇಶ್ವರವು ವಿಜಾಪುರದಿಂದ ಪೂರ್ವಕ್ಕೆ ೪೫ ಕಿ.ಮೀ. ದೂರದಲ್ಲಿದ್ದು, ಬಸವನ ಬಾಗೇವಾಡಿಯಿಂದ ೧೧ ಕಿ. ಮೀ ದೂರವಿದೆ.

ಪರಿವಿಡಿ (index)
*
Previous ಬಿಜನಳ್ಳಿ ಎಣ್ಣೆ ಹೊಳೆ Next