Previous ಮಲೆ ಮಹಾದೇಶ್ವರ ಬೆಟ್ಟ ಶರಣ ಕ್ಷೇತ್ರಗಳು Lingayat Piligram Centers Next

ಶ್ರೀ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌) ಅಳತೆ, ಮಹಾರಾಷ್ಟ್ರ

Allama Prabhu temple, Allama Giri, Alate Maharashtra, ಶ್ರೀ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌) ಅಳತೆ, ಮಹಾರಾಷ್ಟ್ರ

ವ್ಯೋಮಕಾಯ ಸಿದ್ಧರಾದ ನಿರಾಭಾರಿ ಜಂಗಮರಾದ ಶ್ರೀ ಅಲ್ಲಮ ಪ್ರಭುದೇವರು ಅಶ್ವಾರೋಹಿಯಾಗಿ ಶಿಷ್ಯರೊಡನೆ ಕರ್ನಾಟಕ, ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಸಂಚರಿಸಿ ಭಕ್ತರನ್ನು ಉದ್ಧರಿಸಿದ್ದಾರೆ. ಸಂಚಾರ ಮಾಡುತ್ತ ಒಂದು ಸ್ಥಳದಲ್ಲಿ ತಪೋಮಗ್ನರಾಗಿ ತಂಗಿರುತ್ತಾರೆ. ಅದೇ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಹಾತ್‌ಕಣಂಗಲೆ ತಾಲ್ಲೋಕಿನ ಅಳತೆ ಗ್ರಾಮದ ಬಳಿ ಇರುವ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌). ಮರಾಠಿಯಲ್ಲಿ ಅಲ್ಲಮ ಪ್ರಭು ಡೋಂಗರ್‌ ಎನ್ನುತ್ತಾರೆ.

ಅಲ್ಲಮ ಪ್ರಭು ನಂದಾದೀಪ

ಶ್ರೀ ಅಲ್ಲಮ ಪ್ರಭುದೇವರು ಪೂಜೆಯ ಸಮಯದಲ್ಲಿ ಹಚ್ಚಿದ ಜ್ಯೋತಿಯನ್ನು ಅಲ್ಲಮಪ್ರಭು ಶರಣಾಲಯದ (ಗದ್ದುಗೆ) ಪೂಜಾರಿ ವಂಶಸ್ಥರು ನಂದಾದೀಪವಾಗಿ ಕಾಯ್ದುಕೊಂಡು ಬಂದಿರುವುದು ಸ್ಥಳ ವಿಶೇಷ.

Allama Prabhu temple, Allama Giri, Alate Maharashtra, ಶ್ರೀ ಅಲ್ಲಮ ಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌) ಅಳತೆ, ಮಹಾರಾಷ್ಟ್ರ

ಶ್ರೀ ಸಿದ್ಧರಾಮೇಶ್ವರರ ಶರಣಾಲಯವು (ಗದ್ದುಗೆ) ಸಹ ಪಕ್ಕದಲ್ಲೇ ಇದ್ದು ಕೆಲವು ಕಾಲ ಅವರು ಸಹ ಈ ಗಿರಿಯಲ್ಲಿ ತಂಗಿದ್ದಾರೆ. ಈ ಉಭಯತರೂ ಪೂಜೆ-ಧ್ಯಾನಗಳಿಗೆ ಬಳಸುತ್ತಿದ್ದ ಗವಿಯು ಶ್ರೀ ಸಿದ್ಧರಾಮೇಶ್ವರ ಶರಣಾಲಯದ ಕೆಳಗೆ ಇದೆ. ಅಲ್ಲಮ ಪ್ರಭುಗಿರಿಗೆ ಸುಮಾರು ೪ ಕಿ.ಮೀ. ದೂರದಲ್ಲಿ ಸಿದ್ಧರಾಮೇಶ್ವರ ಗಿರಿ (ಸಿದ್ದೋಬಾ ಡೋಂಗರ್‌) ಇದ್ದು ಎತ್ತರವಾದ ಆ ಗುಡ್ಡದ ಮೇಲೆ ಸಹ ಸಿದ್ಧರಾಮೇಶ್ವರ ಶರಣಾಲಯವಿದೆ.

ಅಲ್ಲಮಪ್ರಭು ಗಿರಿ (ಅಲ್ಲಮ ಪ್ರಭು ಡೋಂಗರ್‌), ಗ್ರಾಮ: ಅಳತೆ; ಇದು ಕೊಲ್ಹಾಪುರದಿಂದ ಸಾಂಗ್ಲಿಗೆ ಹೋಗುವ ದಾರಿಯ ಮೇಲೆ ಕೇವಲ ೨೫ ಕಿ. ಮೀ. ದೂರದಲ್ಲಿ ಇದೆ. ಸುಪ್ರಸಿದ್ಧ ಕೈಗಾರಿಕಾ ನಗರ ಇಚಲ ಕರಂಜಿಯಿಂದಲೂ ೨೦ ಕಿ. ಮೀ. ದೂರದಲ್ಲಿದೆ. ಈ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೈನರ ಸುಪ್ರಸಿದ್ಧ ಯಾತ್ರಾಸ್ಥಳಗಳಾದ ಕುಂತಲಗಿರಿ ಮತ್ತು ಬಾಹುಬಲಿ ಬೆಟ್ಟವಿದೆ. ವಡಗಾಂವ ನಗರವೂ ಸಮೀಪದಲ್ಲಿದೆ ಅಲ್ಲಮಪ್ರಭು ಗಿರಿ ಇರುವ ಅಳತೆ ಗ್ರಾಮವು ಹಾತ್‌ಕಣಂಗಲೆ ತಾಲ್ಲೋಕಿನಲ್ಲಿದ್ದು ಹಾತ್‌ಕಣಂಗಲೆಯವರೆಗೆ ರೈಲ್ವೆ ಸೌಲಭ್ಯವಿದೆ. ಇಲ್ಲಿಂದ ರಾಮಲಿಂಗಕ್ಕೆ ಹೋಗುವ ರಸ್ತೆಯಲ್ಲಿ ಅಲ್ಲಮಗಿರಿಗೆ ಹೋಗಬಹುದು.

ಗ್ರಂಥ ಋಣ: ಕಲ್ಯಾಣ ಕಿರಣ ಜನವರಿ-‌ಫೆಬ್ರವರಿ-೨೦೧೭

ಪರಿವಿಡಿ (index)
Previous ಮಲೆ ಮಹಾದೇಶ್ವರ ಬೆಟ್ಟ ಶರಣ ಕ್ಷೇತ್ರಗಳು Lingayat Piligram Centers Next
cheap jordans|wholesale air max|wholesale jordans|wholesale jewelry|wholesale jerseys