Previous Annihilation of caste-Madivala-Machideva Vachana Sahithya Next

Eradication of Discrimination Annihilation of caste

*

Siddharameshwara

ಕುಲಜನಾಗಿ ನಾನೇವೆನಯ್ಯಾ?
ಕುಲದ ಬಳಿಯ ದೇವನಲ್ಲ, ಮನದ ಬಳಿಯ ದೇವನೈಸೆ.
ಆವ ಯೋನಿಜನಾದಡೇನು?
ನೀನೊಲಿದವನೆ ಕುಲಜನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನ. -4/467#
Translation:
What do I do, being high born?
God is not in caste; God is in one’s mind
What matter of what womb one is born?
He alone is high born
Whom you love O Kapil Siddha Mallikarjuna!

Once they become seers
They must not be in another’s debt
Once they become seers
They must not mix with others caste
Once they become seers
They must not speak a lie,
O Kapila Siddha Mallikajuna -4/428#
Translation:

ಜಾತಿ ವಿಜಾತಿಯು ನೀರ್ಗುಡಿಯ ಹೋದರೆ
ಸುಡು ಹೋಗೆಂದು ನೂಂಕಿತ್ತೆ ಆ ಜಲವು!
ಆ ಜಲದಂತಾಗಬೇಡವೆ ಹಿರಿಯರಾದವರು.
ಎನ್ನ ಮನವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ
ನಿಮ್ಮದೊಂದು ಸಮತಾಬುದ್ಧಿ ಎನ್ನನೆಂದು ಬಂದು ಪೊರ್ದಿಪ್ಪುದೊ
ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನದೇವರದೇವಾ. -4/548#
Translation:
If the high caste and the low caste ones go to drink water
Does that water push them away?
Saying ‘G, get burnt’?
Should not the elders be like that water?
Tell me, O Lord Kapila Siddha Mallikarjuna,
When will your virtue of equanimity
That can keep me in calm state of mind, ever possess me?

ಶಿವನು ಚೆನ್ನನು ಮನೆಯಲ್ಲಿ ಅಂಬಲಿಯನುಂಡನೆಂದಡೆ,
ನಮ್ಮ ಗಣಂಗಳು ನಗುವರಯ್ಯಾ,
ಕೈಬಡೆದು ಕೈಬಡೆದು ನಗುವರಯ್ಯಾ.
ಶಿವನಾಚರಣೆ ಶಿವನಿಗಿರಲಿ, ನಮಗೇಕೆಂದರು.
ಶಿವನು ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತನು;
ನಾವು ಉತ್ಪತ್ತಿ ಸ್ಥಿತಿ ಲಯಂಗಳನಳಿಯಬೇಕೆಂದು ಬಂದೆವಲ್ಲದೆ,
ಅವರಲ್ಲಿ ವಾಕ್ಸಾಮರಸ್ಯವಲ್ಲದೆ, ಕಾಯಸಾಮರಸ್ಯವಿಲ್ಲವು.
ಶಬ್ದವಿರಹಿತನಾಗಬೇಕೆಂಬವರಿಗೆ ಶಬ್ದಸೂತಕವೇಕಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ ? -4/1289#
Translation:
If it is said that Shiva ate
Gruel in Chenna’s house, our saints laugh
They laugh clapping their hands again and again
They said, Shiva’s conduct is good for Shiva
Why should we adopt it?
Shiva is the author of birth, life and death
We have come to put an end to them!
Their unity is only in words not in body
Why this defilement of speech
Of those who wish to be free from the obligation of words,
O Kapila Siddha Mallikarjuna?

ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ
ತೆಲುಗ ಜೊಮ್ಮಯ್ಯನಾಗಬಲ್ಲರೆ? -4/1455#
Translation:
Can all potters become a Gundayya?
Can all washer men become a Madivala?
Can all weavers become a Daasimayya?
Can one become a Telugu Jommayya?
Merely for killing animals
O my master Kapila Siddha Mallesha?

ನೀ ಒಲಿವ ಮುಖ ತಿಳಿಯದು ನೋಡಯ್ಯಾ ಆರಿಂಗೆ-
ಬ್ರಾಹ್ಮಣನ ಮೃಷ್ಟಾನ್ನವ ಬಿಟ್ಟು, ಬೇಡನ ಮಾಂಸಕ್ಕೊಲಿದೆ ದೇವಾ;
ಸೌಂದರಚೋಳನ ನೈವೇದ್ಯವನೊಲ್ಲದೆ,
ಚೋಳಿಯಕ್ಕನ ಉಚ್ಛಿಷ್ಟಕ್ಕೆ ಮೈಗೊಟ್ಟೆ ದೇವಾ;
ಚೋಳನ ಭೋಜನವನೊಲ್ಲದೆ,
ಚೆನ್ನಯ್ಯನಕೂಡ ಜಾತಿಗೆಟ್ಟು ಮೈಗೊಟ್ಟು ಒಲಿದೆ ದೇವಾ;
ಒಲಿಸಿಹೆನೆಂದಡೆ ಅಸಾಧ್ಯ!
ಒಲಿಯನೆಂದಡೆ, ಒಂದರಗಳಿಗೆ ಶ್ವೇತಗೆ ಪದವ ಕೊಟ್ಟೇ ದೇವಾ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನದೇವಾ. -4/1470#
Translation:
Nobody knows how to please you
Leaving a Brahmin’s dinner
You preferred a hunder’s flesh!
Rejecting saundara Chola’s offerings
You went after Coliyakk’s leavings!
Declining Chola’s royal feast
You ate with Chenn
And lost your caste!
Impossible to win you!
When though refusing to win
You granted for half an instant
A heavenly for half an instant
A heavenly seat to Sweta
O Kapila Siddha Mallikarjuna Lord!

ಸತ್ಕುಲ ದುಷ್ಕುಲವೆಂಬುದದು ಜಗತ್ಪ್ರಸಿದ್ಧವಯ್ಯಾ.
ಕುಲ ಸತ್ಕುಲ ನಡೆ ವಿಪರೀತವಾದಡೆ ದುಷ್ಕುಲ ನೋಡಯ್ಯಾ.
ಮಧು ಮಕ್ಷಿಕ ಎಂಜಲು ಕುಲ ರುಚಿಯಾದ[ಲ್ಲಿಯೆ],
ಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನ
ತನ್ನ ಪೂಜೆಗೆಂದು ನೇಮಿಸಿದ ಬೊಮ್ಮಣ್ಣ. -4/1525#
Translation:
The whole world knows
What is high caste and
What is low caste?
If a high caste’s conduct is perverse
He is a low caste one
Because the leavings of a bee are sweet
Cahdradhara Kapila Siddha mallikarjuna
Has prescribed it for his worship
O Bommanna

ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ:
ಕುಲವೇ ಡೋಹರನ? ಕುಲವೇ ಮಾದಾರನ?
ಕುಲವೇ ದೂರ್ವಾಸನ? ಕುಲವೇ ವ್ಯಾಸನ?
ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?
ಕುಲವ ನೋಳ್ಪಡೆ ಹುರುಳಿಲ್ಲ ;
ಅವರ ನಡೆಯ ನೋಳ್ಪಡೆ ನಡೆಯುವರು ತ್ರಿಲೋಕದಲ್ಲಿಲ್ಲ
ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ. -4/1526#
Translation:
Hear me, you who fight
Over the question of caste
Was Dohara high-born?
Was Maadara high-born?
Was Durvasa high-born?
Was vaalmiki high-born?
Was Kaundilya high-born?
Caste-consideration is meaningless
If you see their conduct
There is none in the three worlds
To match it, look you
Kapila Siddha Mallikarjuna!

ವಾಲ್ಮೀಕನ ಶೇಷಪ್ರಸಾದವೆಲ್ಲ ಸಂಸ್ಕೃತಮಯವಾಯಿತ್ತು ಮರ್ತ್ಯಕ್ಕೆ.
ದೂರ್ವಾಸನ ಉಪದೇಶವೆಲ್ಲ ಚಂಡಾಲರ ಮುನಿಗಳ ಮಾಡಿತ್ತು ಸ್ವರ್ಗಕ್ಕೆ
ಕುಲವೆಂದಡೆ ಮಲತ್ರಯವು ಬಿಡವು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ. -4/1527#
Translation:
Vaalmiki’s left over became Sanskritised prasada
Durvaasa’s preaching transformed Chandalas into sages for heaven’s sake
If you harp on caste, the triple impurity will not leave you,
Look, O Kapila Siddha Mallikarjuna?

ಚತುರ್ವರ್ಣಿಯಾದಡೇನು,
ಚತುರ್ವರ್ಣಾಂಕೀತನೆ ವೀರಶೈವ ನೋಡಾ.
ಚತುರ್ವೆದಿಯಾದಡೇನು, ದೇಹವಳಿಯದವನೆ ಚಾಂಡಾಲ ನೋಡಾ.
ಚತುರಂಗಬಲಯುಕ್ತನಾದಡೇನು,
ಚತುರಗುಣವಿಲ್ಲದ್ದಡೆ ದೇಶವನಾಳ್ವ ಪರಿಯ ನೋಡಾ.
ದೇಹಿಯಾಡೇನು, ಗಜಚರ್ಮಧರ ಕಪಿಲಸಿದ್ಧಮಲ್ಲಿಕಾರ್ಜುನ
ಪ್ರಸನ್ನವಾಗದನ್ನಕ್ಕ ಬಾಳುವೆ ನೋಡಾ. -4/1701#
Translation:
What if one belongs to one of the four castes?
He is a Veerashiava
Who can transcend the four castes?
What if one has read the four Vedas?
He is a Chandala
Who has not shed the body?
What if one heads a four-fold army?
Look how he rules his state without wit and wisdom!
Look, what boots a grand body,
What means the existence?
Unless Gajcharmadhara Kapila Siddha Mallikarjuna
Smiles his benediction on him?

#: 4/467 number indicaets, 4-Vachana Samputa number 467-Vachana number, in the 15 samputas of Samagara Vachana Sahithya, pub: Kannada and Culture Department, Government of Karnataka.
ಈ ತರಹದ ಸಂಖ್ಯೆಯ ವಿವರ:-4/467 :- ಸಮಗ್ರ ವಚನ ಸಂಪುಟದ ಸಂಖ್ಯೆ-4, ವಚನ ಸಂಖ್ಯೆ-467 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001)
English translation is from the book "Heaven of Equality", Translated by Dr. C. R. Yaravintelimath and Dr. M. M. Kalburgi. Pub: Shree Basaveshwara Peetha, Karnataka University Dharwad-580003. 2003.

Back to index
Previous Annihilation of caste-Madivala-Machideva Vachana Sahithya Next
cheap jordans|wholesale air max|wholesale jordans|wholesale jewelry|wholesale jerseys