'ವಚನ ಸಾಹಿತ್ಯದ ಪಿತಾಮಹ' ಡಾ|| ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ )

*

ರಾವ್ ಸಾಹೇಬ, ರಾವಬಹದ್ದೊರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ

ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಜನನ: ಜುಲೈ ೨, ೧೮೮೦
ಮರಣ: ಜೂನ್ ೨೯, ೧೯೬೪
ವೃತ್ತಿ: ಸಂಶೋಧಕರು, ಸಾಹಿತಿ, ವಕೀಲರು ವಚನ ಪಿತಾಮಹ ಎಂದು ಪ್ರಖ್ಯಾತರಾದವರು.

೧೨ನೇ ಶತಮಾನದ ನಂತರ ವಚನ ಸಾಹಿತ್ಯಕ್ಕೆ ಪುನರ್ ಚೈತನ್ಯವನ್ನು ತಂದು ಕೊಟ್ಟು ಕೀತಿ೯ ಹಳಕಟ್ಟಿ ಅಜ್ಜನವರಿಗೆ ಸುಲ್ಲುತ್ತದೆ.. ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳೆಕಿಗೆ ತಂದರು. ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿ ವೀರರಾಗಿ ಸಾಧಿಸಿದರು ಅವರು ಒಂದು ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಬದುಕಿದರು.

ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಬಿಜಾಪುರಕ್ಕೆ ಬಂದಿಳಿದಾಗ ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನೋಡುವಿರಾ?” ಅದಕ್ಕೆ ನಕ್ಕು ಬಿ.ಎಂ.ಶ್ರೀ ಅವರು ಉತ್ತರಿಸಿದರಂತೆ “ಮೊದಲು ನಾನು ವಚನಗುಮ್ಮಟವನ್ನು ನೋಡಬೇಕಾಗಿದೆ” ಎಂದು. ಆ ವಚನ ಗುಮ್ಮಟವೇ ವಚನ ಪಿತಾಮಹರೆಂದು ಖ್ಯಾತನಾಮರಾದ ರಾವಬಹದ್ಧೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು.

Phakirappa Gurubasappa Halkatti, ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ )

ಕರ್ನಾಟಕದ ವಚನಗುಮ್ಮಟ ಡಾ|| ಫ.ಗು.ಹಳಕಟ್ಟಿ ಹುಟ್ಟಿದ್ದು ೧೮೮೦ರ ಜುಲೈ ೨ ರಂದು ಧಾರವಾಡದಲ್ಲಿ. ತಾಯಿ ದಾನಮ್ಮ (ದಾನಾದೇವಿ) ತಂದೆ ಗುರುಬಸಪ್ಪವರು ಶಾಲಾ ಶಿಕ್ಷಕರಾಗಿದ್ದರು. ಇವರ ಪೊವ೯ಜರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೊಕಿನ ಹಳಕಟ್ಟಿಯಿಂದ ಬಂದವರು ಅಂತೆಯೇ ಅವರ ಮೆನೆತನದ ಹೆಸರು ಹಳಕಟ್ಟಿ ಎಂದಾಗಿದೆ. ಇವರ ಪೂರ್ಣ ಹೆಸರು ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂದಿದ್ದರೂ ಹೆಸರಾದದ್ದು ಮಾತ್ರ ಫ.ಗು.ಹಳಕಟ್ಟಿ ಎಂದೇ!

ಫ.ಗು.ಹಳಕಟ್ಟಿಯವರ ತಂದೆ ಗುರುಬಸಪ್ಪ ಅವರು ಬಹಳ ದೊಡ್ಡ ಸಾಹಿತಿಗಳು ಹಾಗು ವಿದ್ವಾಂಸರಾಗಿದ್ದರು ಅವರು ಕನ್ನಡ, ಸಂಸ್ಕೃತ ಸಾಹಿತ್ಯಗಳಲ್ಲಿ ಪಳಗಿದವರಾಗಿದ್ದರು. ಆದ ಕಾರಣ ಧಾರವಾಡ ಡೆಪ್ಯುಟಿ ಎಜುಕೇಶನ ಇನ್ಸಪೆಕ್ಟರ ಆಫೀಸಿನಲ್ಲಿ ಸೀನಿಯರ್ ಕರಣಿಕರೆಂದು ವಗಾ೯ಯಿಸಲ್ಪಟ್ಟರು.

ಅವರು ಕನ್ನಡದಲ್ಲಿ ಇಡೀ ಇಂಗ್ಲೆಂಡ್ ದೇಶದ ಇತಿಹಾಸವನ್ನು ಸಂಗ್ರಹಿಸಿ ಗ್ರಂಥ ರೊಪದಲ್ಲಿ ಪ್ರಕಟಿಸಿದ್ದರು.. ಮತ್ತು ಈಗಿನ ಪಂಚಾಯತ ರಾಜ್ಯ ವ್ಯವಸ್ಥೆಯನ್ನು ಆಗಿನ ಕಾಲದಲ್ಲಿ ಮೊಟ್ಟಮೊದಲು ಜಾರಿಗೆ ತಂದ ಕೀತಿ೯ ಗುರುಬಸಪ್ಪನವರಿಗೆ ಸಲ್ಲುತ್ತದೆ. ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಇಂಥವರ ಮಗ ಫ.ಗು.ಹಳಕಟ್ಟಿ ಎಂದರೆ ಕೇಳಬೇಕೇ? ಸಾಹಿತ್ಯವೆಂಬುದು ಇವರಿಗೆ ರಕ್ತಗತವಾಗಿ ಒಲಿದು ಬಂದಿತ್ತು. ಇದಕ್ಕೆ ತಕ್ಕ ಹಾಗೆ ಮಗ ಒಳ್ಳೆ ಸಾಹಿತಿಯಾಗಿ ಮುಂದೊಂದು ದಿನ ಕನ್ನಡ ನಾಡಿಗೆ ಕೀರ್ತಿ ತರಲೆಂಬ ಹೆಬ್ಬಯಕೆಯಿಂದ ಎಳೆವಯಸ್ಸಿನಲ್ಲೇ ಮಗನಿಗೆ ಪ್ರೋತ್ಸಾಹದ ಹಾಲೆರೆದಿದ್ದರು.

ಫಕೀರಪ್ಪನವರು ಮೂರುವಷ೯ದ ಮಗು ಇದ್ದಾಗಲೇ ಅವರ ಪ್ರೀತಿಯ ತಾಯಿ ದಾನಮ್ಮ ಲಿಂಗೈಕ್ಯರಾಗಿದ್ದರು. ಆಗ ಗುರುಬಸಪ್ಪನವರು ಇನ್ನೊಂದು ಮದುವೆ ಆದರೆ ಆ ಮಗುವಿಗೆ ಮಲತಾಯಿ ಆಗುವಳು ಎಂದು ತಿಳಿದು ಅವರು ಮದುವೆ ಆಗದೆ ಆ ಮಗುವಿನ ಆರೈಕೆ ತಾವೇ ಮಾಡಿದ್ದರು ಗಂಡು ಮಗು ಹುಟ್ಟಿದಾಗ ಸಂತೋಷ ಪಡುವುದು ಅಷ್ಟೇ ತಂದೆಯ ಕೆಲಸವಲ್ಲ, ಹೇಗಾದರು ಮಗುವಿನ ಲಾಲನೆ ಪಾಲನೆ ಪೋಷಣೆ ಮಾಡಿ. ದೈಹಿಕ, ಮಾನಸಿಕ, ಭೌತಿಕ, ಹಾಗೊ ಧಮ೯ವಂತರಾಗಿ ಬೆಳೆಸುವ ಛಲವನ್ನು ತೊಡುತ್ತಾರೆ ಮತ್ತು ಹಾಗೆ ಬೆಳೆಸುತ್ತಾರೆ. ಇವರಿಗೆ ಸಹಾಯಕ್ಕಾಗಿ ಅವರ ತಾಯಿ ಅಂದರೆ ಹಳಕಟ್ಟಿ ಅವರ ಅಜ್ಜಿ ಬಸಮ್ಮರ ಆಶ್ರಯದಲ್ಲಿ ಅವರ ಬೆಳವಣಿಗೆ ಆಗುತ್ತದೆ. ಹೀಗೆ ತಂದೆ, ಅಜ್ಜಿ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹೆಜ್ಜೆಗಳನ್ನೂರುತ್ತಾ ಬಂದ ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ರಲ್ಲಿ ಮೆಟ್ರಿಕ್ ಮುಗಿಸಿದರು.

ಶಿಕ್ಷಣ

ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದ ಬಗ್ಗೆ ಅಲ್ಲಿದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.

೧೮೯೭ರಲ್ಲಿ ಬನಹಟ್ಟಿಯ ಚಕ್ಕೋಡಿ ತಮ್ಮಣ್ಣಪ್ಪನವರು ಮಗಳು ಭಾಗೀರಥಿಯೊಡನೆ ಇವರ ವಿವಾಹವಾಗುತ್ತದೆ. ಗೃಹಸ್ಥಾಶ್ರಮ ಪ್ರವೇಶಿಸಿದರಾದರೂ ಸಾರ್ವಜನಿಕ ಬದುಕಿನ ಸೇವಾಹಾದಿಯಿಂದ ಹಿಂದೆ ಸರಿಯದೆ ಮತ್ತಷ್ಟು ದೃಢವಾಗಿ ಮುನ್ನುಗ್ಗಿದರು.

೧೯೦೧ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು ೧೯೦೪ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲವೃತ್ತಿಯನ್ನು ಆರಂಭಿಸುತ್ತಾರೆ.

ಧಾರವಾಡಲ್ಲಿ ಪ್ಲೇಗ್ ಬೇನೆ ಹಾವಳಿ ಹೆಚ್ಚಾಗಿರುವದರಿಂದ ಫಕೀರಪ್ಪನ್ನವರು ಕೆಲವು ವಷ೯ ಬನಹಟ್ಟಿಯಲ್ಲಿ ವಾಸವಾಗಿದ್ದರು ಆ ವೇಳೆಯಲ್ಲಿ ಅವರ ಜೀವನ ದೊಡ್ಡ ತಿರುವನ್ನು ಪಡೆಯಿತು.

೧೯೦೩ ರಲ್ಲಿ ಶಿವಲಿಂಗಪ್ಪ ಪಂಚಾಳ ಅವರ ಮನೆಗೆ ಹೋಗಿರುತ್ತಾರೆ ಅಲ್ಲಿ ಅವರಿಗೆ "ಷಟಸ್ಥಳ ತಿಲಕ" ಮತ್ತು ವಚನ ತಾಡೋಲೆಗಳನ್ನು ನೋಡಿ ಬಹಳ ಆಕರ್ಷಿತರಾಗುತ್ತಾರೆ. ಅವರ ಮಾವನಾದ 'ತಮ್ಮಣ್ಣ ಚಿಕ್ಕೋಡಿ' ಯವರು ತಾಡೋಲೆ ಮಹತ್ವ ಬಗ್ಗೆ ತಿಳಿಸುತ್ತಾರೆ. ಅವರು ರಬಕವಿ,ಬನ್ಮಟ್ಟಿ,ಗೋಠೆ ಅನೇಕ ಊರುಗಳನ್ನು ಸುತ್ತಾಡಿ ತಾಡೋಲೆ ಗ್ರಂಥಗಳನ್ನು ಸಂಗ್ರಹಿಸುತ್ತಾರೆ. ವೀರಭದ್ರಪ್ಪನವರ ಪರಿಚಯದಿಂದ ಗೋಠೆ ಗ್ರಾಮಕ್ಕೆ ಹೋದಾಗ ಅಲ್ಲಿ ಫಕೀರಪ್ಪನ್ನವರಿಗೆ ಅತ್ಯಮೂಲ್ಯ ಗ್ರಂಥಭಾಷ್ಯಾ ರತ್ನಮಾಲೆ ನೋಡಲು ಸಿಕ್ಕವು ಅವು ಅವರ ಬದುಕಿನ ದಿಕ್ಕನೆ ಬದಲಿಸಿದ್ದವು ಬಸವಾದಿ ಶರಣರ ವಚನ ಸಾಹಿತ್ಯ ಸಂಶೋಧನೆಗೆ ಮನಸ್ಸು ಹಾತೂರೆಯತೊಡಗಿತು.

ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ಬಿಜಾಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ಬಿಜಾಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಒಂದೆಡೆ ವಕೀಲಿ ವೃತ್ತಿ, ಮತ್ತೊಂದೆಡೆ ನಾಡು-ನುಡಿಯ ಪ್ರಗತಿಗಾಗಿ ಹಲವು ಹತ್ತು ರೀತಿಯಲ್ಲಿ ದುಡಿಮೆ. ಇದು ಅವರ ನಿತ್ಯ ಕಾಯಕವಾಗಿತ್ತು.

ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ ೧೯೦೫ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ತನ್ಮೂಲಕ ಕನ್ನಡ ಶಾಲೆಗಳ ಅಭ್ಯುದಯಕ್ಕಾಗಿ, ಗ್ರಾಮೀಣ ಜನರ ಉನ್ನತಿಗಾಗಿ ಎಂದೂ ಮರೆಯದಂಥ ಜನಸೇವೆಗೈದ ಹಿರಿಮೆ ಇವರದು. ಅಂತೆಯೇ ೧೯೨೩ರಲ್ಲಿ ಸರ್ಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾದ ಇವರು ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ.

ರೈತ ಸೇವಾಸಂಘ ಹಣಕಾಸು ಸಂಸ್ಥೆ, ಸಿದ್ದೇಶ್ವರ ಬ್ಯಾಂಕ, ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ಮೊದಲಾಗಿ ಹಲವಾರು ಸಂಸ್ಥೆಗಳನ್ನು ಕಟ್ಟಿದ್ದರು...

ಬಿಜಾಪುರದಲ್ಲಿ ಕನ್ನಡ ಶಾಖೆಗಳನ್ನು ತೆರೆದು ಕನ್ನಡ ವಾತಾವರಣ ನಿಮಿ೯ಸಿದ್ದರು. ಇವರ ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಯನ್ನು ನೋಡಿ ಸರಕಾರ "ರಾವ್ ಸಾಹೇಬ" ಮತ್ತು "ರಾವಬಹದ್ದೊರ" ಎಂಬ ಬಿರುದ್ದನ್ನು ನೀಡಿ ಗೌರವಿಸಿತು.

ವಚನ ಸಾಹಿತ್ಯಕ್ಕೆ ಕಾಯಕ

ಇವರು ವಚನ ಸಾಹಿತ್ಯ ಪುನರುಜ್ಜೀವನಕ್ಕೆ ತಮ್ಮ ಜೀವನ ಮುಡಿಪಿಟ್ಟರು..
ಪ್ರಭುಲಿಂಗ ಲೀಲೆ ಎಂಬ ಷಟ್ಪದಿ ಗ್ರಂಥ ಹಾಗೂ ಗುಬ್ಬಿ ಮಲ್ಲಣ್ಣವರು ಸಂಗ್ರಹಿಸಿದ 'ಘನ ಭಾಷಾ ರತ್ನ ಮಾಲೆ', 'ಷಟಸ್ಥಳ ತಿಲಕ', ಇವು ಅವರ ಮೇಲೆ ಬಹಳ ಆಕ೯ಷಿತವಾದವು ಈ ತಾಡೋಲೆಗಳನ್ನು ಸಂಗ್ರಹಿಸಿ ವಚನಗಳನ್ನು ಪ್ರಕಟಿಸಲು ಅವರ ವಕೀಲ ವೃತ್ತಿ ಅಡ್ಡಿಯಾದ ಕಾರಣ ಅದನ್ನೆ ಬಿಡುತ್ತಾರೆ.

ಅವರು ನೊರಾರು ಶಿವ-ಶರಣೆಯರ ವಚನಗಳನ್ನು ಹುಡುಕಿ ಅವುಗಳನೆಲ್ಲಾ ಸಂಗ್ರಹಿಸಿ ಮೊಟ್ಟ ಮೊದಲು "ಶೂನ್ಯ ಸಂಪಾದನೆ ಮತ್ತು ವಚನಶಾಸ್ತ್ರ ಸಾರ" ಎಂಬ ಗ್ರಂಥವನ್ನು ಪ್ರಕಟಿಸುತ್ತಾರೆ.

ಇದನ್ನು ಮುದ್ರಣಕ್ಕಾಗಿ ೧೯೨೩ ರಲ್ಲಿ ಮಂಗಳೊರು ಬ್ಯಾಸೆಲ್ ಕ್ರಿಶ್ಚಿಯನ್ ಮಿಶನರಿ ಪ್ರೆಸ್ ಗೆ ಕಳುಸಿದ್ದರು ಇದರ ಮುದ್ರಣಕ್ಕಾಗಿ ರೊ ೫೦೦ ಮುಂಗಡದೊಂದಿಗೆ ಕಳಿಸಿದ್ದರು.

ಆದರೆ ಮುದ್ರಾಲಯದ ಮುಖ್ಯಸ್ಥರು ಈ ಗ್ರಂಥ ವನ್ನು ಓದಿ ಇದರ ಮಹತ್ವವನ್ನು ಅರಿತು ವಚನಗಳ ಪ್ರಕಟಕಣೆಯಿಂದ. ತಮ್ಮ ಮಿಶನರಿ ಉದ್ದೇಶಕ್ಕೆ ಭಂಗವಾದಿತೆಂದು ಹಸ್ತಪ್ರತಿ ಮತ್ತು ಕಳಸಿದ್ದ ಹಣವನ್ನು ವಾಪಸು ಕಳಿಸಿದ್ದರು.

ನಂತರ ಹಳಕಟ್ಟಿಯವರು ಬೆಳಗಾವಿಯ ಚೌಗಲೆಯವರ ಮಹಾವೀರ ಪ್ರೆಸ್ ನಲ್ಲಿ ಮುದ್ರಿಸಿ ಪ್ರಕಟಿಸಿದ್ದರು.
ಈ ಗ್ರಂಥಗಳನ್ನು ಓದಿ ಕನ್ನಡ ಪಂಡಿತರು ಸಾಹಿತಿಗಳು ಆದ ಆರ್ ಎನ್ ನರಸಿಂಹಾಚಾರ್ಯರು, ಬೆನಗಲ್ ರಾಮರಾಮ, ಕೆ.ಪಿ. ಪುಟ್ಟಣ್ಣಾಶಟ್ಟರು, ಶ್ರೀನಿವಾಸಮೂತಿ೯, ಬಿ.ಎಂ.ಶ್ರೀ, ಉತ್ತಂಗಿ ಚೆನ್ನಬಸಪ್ಪ ಮುಂತಾದವರು.
ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಗ್ರಂಥ ರೊಪದಲ್ಲಿ ಪ್ರಕಟ ಮಾಡಿದ್ದಕ್ಕಾಗಿ "ವಚನ ಪಿತಾಮಹ" ಎಂದು ಹೆಸರಾದರು.

ಬಿ ಎಂ ಶ್ರೀ ಇವರನ್ನು ಸಕಲ ಕನ್ನಡಿಗರ ಹೃದಯಗಳಲ್ಲಿ "ವಚನ ಗುಮ್ಮಟ" ಗಳನ್ನು ನಿಮಿ೯ಸಿದ ಮಹಾಶಿಲ್ಪಿ, ಶ್ರೇಷ್ಠ ಶರಣ ಫಕೀರಪ್ಪ ಎಂದು ಕರೆದರು.

ವಚನ ಸಾಹಿತ್ಯ ಸಂಶೋಧನೆಗಾಗಿ ಹಳಕಟ್ಟಿ ಅಜ್ಜನವರು ತುಂಬಾ ಕಷ್ಟಪಟ್ಟು ನಮಗಾಗಿ ಸಂಗ್ರಹಿಸಿ ಕೊಟ್ಟು ಹೋದರು.

ವಚನ ಸಾಹಿತ್ಯ ಪ್ರಸಾಕ್ಕಾಗಿ

* ೧೯೨೫ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು.
* ೧೯೫೬ ರಲ್ಲಿ ' ಶಿವಾನುಭ ತೈಮಾಸಿಕ ಪತ್ರಿಕೆ' ಪ್ರಾರಂಭ
* ೧೯೨೮ ರಲ್ಲಿ 'ನವಕನಾ೯ಟಕ' ವಾರ ಪತ್ರಿಕೆ ಪ್ರಾರಂಭಿಸಿದ್ದರು.

ಇದರ ಜೊತೆಗೆ ಅನೇಕ ಜನ ಶಿವ-ಶರಣ-ಶರಣೆಯರ ಕುರಿತು ಬರೆದ ಶೂನ್ಯ ಸಂಪಾದನೆಗಳು ೨೫ ವಷ೯ಗಳಲ್ಲಿ ಸುಮಾರು ೯೦೦೦ ಪುಟಗಳಲ್ಲಿ ೭೫ ಗ್ರಂಥಗಳನ್ನು ಪ್ರಕಟಿಸಿದ್ದರು.

ಇವರ ಸೇಹ್ನಿತರಾದ ಬಬಲೇಶ್ವರದ ಸಂಗಪ್ಪ ಮಿಜಿ೯, ಚೊಳಚ ಗುಡ್ಡದ ಚಂದ್ರಶೇಖರಯ್ಯಾ ಮಠ ಅವರು ಇವರ ಕೆಲಸಕ್ಕೆ ಹೆಗಲಿಗೆ ಹೆಗಲು ಕೊಟ್ಟು ನಿಂತು ತನು ಮನ ಧನದಿಂದ ಸಹಾಯ ಮಾಡಿದ್ದವರು.

ಹಡೆ೯ಕರ ಮಂಜಪ್ಪನವರು, ಬಂಥನಾಳ ಶಿವಯೋಗಿಗಳು ಇವರು ಕೈ ಕೊಂಡ ಕಾಯ೯ಕ್ಕೆ ಸ್ಪಂದಿಸಿ ಪ್ರೋತ್ಸಾಹಿಸಿದರು.

ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ನಲ್ಲಿ ಭಾಷಾಂತರಿಸಿ "ಇಂಡಿಯನ್ ಆ್ಯಂಟಿಕ್ವರಿ" ಯಲ್ಲಿ ಪ್ರಕಟಿಸಿದ್ದರು. ವಚನಗಳನ್ನು ಮೊಟ್ಟಮೊದಲು ಇಂಗ್ಲಿಷ್ ಭಾಷೆಗೆ ತಜು೯ಮೆ ಗೊಳಸಿದ ಶ್ರೇಯಸ್ಸು ಅಜ್ಜನವರಿಗೆ ಸಿಕ್ಕುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ೧೯೨೬ ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿತು. ೧೯೯೨೮ ರಲ್ಲಿ ಧಾರವಾಡದಲ್ಲಿ ನಡೆದ ಕನಾ೯ಟಕ ಏಕೀಕರಣ ಸಭೆಗೆ ಇವರು ಅಧ್ಯಕ್ಷರಾಗಿದ್ದರು. ೧೯೯೩ ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಅಧ್ಯಕ್ಷರಾದರು ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜ ಸ್ಥಾಪನೆಗೆ ಧಾರವಾಡದಲ್ಲಿ ವಿಶ್ವ ವಿದ್ಯಾಲಯ ಬಾಗಲಕೋಟೆ ಬಸವೇಶ್ವರ ಕಾಲೇಜ ಸ್ಥಾಪನೆಗೆ ವಿಶೇಷ ಪ್ರಯತ್ನ ಮಾಡಿದರು.

ಕನಾ೯ಟಕ ವಿಶ್ವ ವಿದ್ಯಾಲಯ ಇವರಿಗೆ ೧೯೫೬ ರಲ್ಲಿ "ಡಾಕ್ಟರೇಟ್ ಪದವಿ" ನೀಡಿ ಗೌರವಿಸಿತು.

ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡಿದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈದ ಆಲಯಗಳಿಲ್ಲ, ಸಂಶೋಧನೆಗೊಂಡ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು ೧೯೨೦ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು. ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ ೧೯೨೫ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನ ಕೃತಿಗಳೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ತಮ್ಮ ಸಂಶೋಧನೆಯ ಮೂಲಕ ೨೫೦ ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿಯ ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಇವರ ಹೆಸರಿನಲ್ಲಿದೆ.

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ" ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ ೧೯೨೩ ರಿಂದ ೧೯೩೯ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು ೧೭೫ಕ್ಕೂ ಹೆಚ್ಚೆಂದರೆ ಯಾರೂ ಬೇಕಾದರೂ ಊಹಿಸಬಹುದು. ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು! ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ..... ಮುಂತಾದವುಗಳು ಇವರ ಪ್ರಮುಖ ಕೃತಿಗಳು.

Phakirappa Gurubasappa Halkatti, ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ )

ಪತ್ರಿಕೋದ್ಯಮದಲ್ಲಿ

ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು ೧೯೨೬ರಲ್ಲಿ ಸಂಶೋಧನೆಗಾಗಿ ಮೀಸಲಾದ "ಶಿವಾನುಭವ" ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು ೧೯೫೧ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ ೧೯೨೭ರಲ್ಲಿ "ನವ ಕರ್ನಾಟಕ" ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.

ಸಂಸ್ಥೆಗಳ ಸ್ಥಾಪನೆ

ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ... ಹೀಗೆ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದರು. ಇವರು ೧೯೧೦ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ) ವನ್ನು ಮತ್ತು ೧೯೧೨ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಇವರು ಮಹತ್ತರ ಪಾತ್ರ ವಹಿಸಿದ್ದರು.

ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು ೧೯೬೪ರ ಜೂನ್ ೨೭ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ. ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ ಎಂದರೆ ಯಾರಿಗಾದರೂ ಅರ್ಥವಾಗುತ್ತದೆ. ಹಳಕಟ್ಟಿಯವರು ಸಂಸ್ಥಾಪಿಸಿದ್ದ ಸಂಸ್ಥೆಯೊಂದರ ಬೆಳವಣಿಗೆಯ ಪರಿ ಎಂಥಾದ್ದೆಂದು!

೧೯೨೦ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, ೧೯೨೬ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೨೮ರಲ್ಲಿ ಜರುಗಿದ ೩ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, ೧೯೩೧ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ೧೯೩೩ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ೧೯೫೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.

ಅಮರ ವ್ಯಕ್ತಿತ್ವ

ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು ೧೯೬೪ರ ಜೂನ್ ೨೯ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ.

Phakirappa Gurubasappa Halkatti, ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ )

ವಚನ ಪಿತಾಮಹ

ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಗೊಳಿಸಿದರು. ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗ್ ಗಾಗಿ ಮುಂಬಯಿಯವರೆಗೆ ಕಳುಹಿಸಿದರು. ಹೀಗೆ ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಕೈಗೊಂಡ ಅವರನ್ನು ’ವಚನ ಪಿತಾಮಹ’ ಎಂದು ಕರೆದಿರುವುದು ಉಚಿತವಾಗಿದೆ.
ಬಡತನವೇ ಅವರ ಬಂಡವಾಳವಾಗಿತ್ತು ಆದರೂ ಕನ್ನಡಕ್ಕೊಬ್ಬರೆ ಜಟ್ಟಿ ಹಳಕಟ್ಟಿ ಅಜ್ಜನವರು
ಹಿಡಿದ ಕಾರ್ಯವನ್ನು ಮಾಡಿದ ಸಾಲವನ್ನು ತೀರಿಸಲು ತಮ್ಮ ಸ್ವಂತ ಮನೆಯನ್ನೇ ಮಾರಿದರು.
'ನಡೆದರೆಡಹುವರಲ್ಲದೆ
ಕುಳಿತವರೆಡಹುವರೆ'
ಎಂಬಂತೆ ಕೆಲಸ ಮಾಡುವರಿಗೇ ಆಪತ್ತುಗಳು ಸುತ್ತಿ ಬರುತ್ತವೆ ಹಲವಾರು ಬಾರಿ ಅನಾರೋಗ್ಯದಿಂದ ಬಳಲಿದರು. ಆಘಾತಕ್ಕೆ ಈಡಾದರು.ಹಿರಿಯ ಮಗನನ್ನು ಕಳೆದುಕೊಂಡರು..

ಮಹಾಯುದ್ಧದ ಕಾಲಕ್ಕೆ ಮುದ್ರಣ ಸಾಮಾಗ್ರಿ ಸಿಗದೆ ಕಂಗೆಟ್ಟರು. ಅವರೊಬ್ಬ ಸ್ಥಿತ ಪ್ರಜ್ಞೆ ವ್ಯಕ್ತಿಯಾಗಿದ್ದರು.

ಬಂದ ಎಲ್ಲ ಆಪತ್ತು ವಿಪತ್ತುಗಳನ್ನು ಧೈಯ೯ದಿಂದ ಎದುರಿಸಿದರು.ಎಲೆ ಮರೆಯ ಕಾಯಿಯಂತೆ ಬಾಳಿ ಬದುಕಿ ಸಮಾಜ ಹಿತಕ್ಕಾಗಿ ತಮ್ಮನ್ನು ಸಮಪಿ೯ಸಿಕೊಂಡರು...

ಅವರು ಮಾಡಿದ ಬಹುಮುಖ ಸಾಧನೆಗಳನ್ನು ಮೆಚ್ಚಿ ನಾಡಿನ ಜನತೆ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಅವರನ್ನು ವಚನ ಪಿತಾಮಹ, ವಚನಗುಮ್ಮಟ ,ರಾವಸಾಹೇಬ, ಇಳೆಗಿಳೆದ ಶರಣ ಮುಂತಾದ ಹೆಸರುಗಳಿಂದ ಕರೆದ್ದೀದ್ದಾರೆ..

ಮಾಹಲಿಂಗಪುರದ ಅವರ ಅಭಿಮಾನಿಗಳು ಬಿ.ಎಮ್ ಪಾಟೀಲರ ನೇತೃತ್ವದಲ್ಲಿ "ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಸ್ಥಾಪಿಸಿ" ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅಹ೯ ವ್ಯಕ್ತಿಗಳಿಗನ್ನು ಗುರುತಿಸಿ ಪ್ರತಿ ವಷ೯ "ಹಳಕಟ್ಟಿ" ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ..

ಶರಣ ಹಳಕಟ್ಟಿಯವರು ನುಡಿದ್ದುದೇ ವೇದವಾಯಿತು. ನಡೆದುದೇ ಬಟ್ಟೆಯಾಯಿತು. ಅವರು ಎಂಭತ್ತನಾಲ್ಕು ವರುಷಗಳ ಸಾಥ೯ಕ ಬಾಳು.
ಮುಪ್ಪಿನಿಂದ ಶರೀರವು ಹಣ್ಣಾದಂತೆ ಮನವು ಹಣ್ಣಿನೊಳಗಿನ ತನಿರಸದಂತಾಯಿತು. ಅವರು ನಿದ್ರೆಗೈದುದೇ ಜಪವಾಯಿತು. ಎದ್ದು ಕುಳಿತ್ತೀದ್ದೇ ಶಿವರಾತ್ರಿಯಾಯಿತು. ನಡೆದ ದಾರಿ ಪಾವನವಾಯಿತು. ನುಡಿದಮಾತು ಶಿವತ್ತತ್ವವಾಯಿತು.

ಅವರ ಕಾಯ ವಂಚನೆ ಮಾಡಲ್ಲಿಲ್ಲಾ. ತನ್ನದೆನ್ನುವುದೆಲ್ಲವನ್ನು ಸಕಲ ಜೀವಾತ್ಮರಿಗೆ ಲೇಸಿಗಾಗಿ ಈಡಾಡಿದ ಮಹಾಶರಣರವರು..

ಅವರು ಉಪಮಾತೀತರು, ಕಾಲಕಮ೯ರಹಿತರು, ಭವರಹಿತರು, ಇಂತಹ ದೈವೀಗುಣಗಲನ್ನು ಅಳವಡಿಸಿಕೊಂಡ ಶಿವಶರಣರು. ಡಾ.ಫ.ಗು.ಹಳ್ಳಕಟ್ಟಿ ಅವರು ೨೯-೬-೧೯೬೪ ರಂದು ಕರಪೋರದ ಗಿರಿಯ ಉರಿಕಂಡತೆ ಲಿಂಗದಲ್ಲಿ ಐಕ್ಯರಾದರು. ಲಿಂಗೈಕ್ಯರಾದರು.

ಬಸವತ್ತತ್ವ ಲಿಂಗಾಯತ ಧಮ೯ಕ್ಕೆ ಹಳಕಟ್ಟಿ ಅಜ್ಜನವರ ಕೊಡಗೆ ಅಪಾರ. ಅಜ್ಜನವರು ಸಂಶೋಧನೆ ಮಾಡಿದ್ದ ವಚನ ಸಾಹಿತ್ಯ ಇಂದು ನಮ್ಮಲ್ಲೆರ ಬಾಳಿನ ಬೆಳಕನ್ನಾಗಿಸಿದೆ...

ನಾವೆಲ್ಲ ಹಳಕಟ್ಟಿ ಅಜ್ಜನವರ ಋಣತೀರಿಸಲು ಅಸಾಧ್ಯ ಆದರೆ ಪ್ರತಿನಿತ್ಯ ಒಂದಾದರೂ ವಚನಗಳನ್ನು ಓದಿ ಸಾಧ್ಯವಾದಷ್ಟು ಜೀವನದಲ್ಲಿ ಪಚನ ಮಾಡಿಕೊಳ್ಳುವುದರ ಮೊಲಕ ಅವರಿಗೆ ಗೌರವನ್ನು ಸಲ್ಲಿಸೋಣಾ...
ಫ.ಗು.ಹಳಕಟ್ಟಿಯವರ ಚಿತ್ರಪಟ (ಫೊಟೊ)

*
Previousಮುರಘಾ ಮಠ ಚಿತ್ರದುರ್ಗಶ್ರೀ ಸಿದ್ಧಗಂಗಾ ಮಠ ತುಮಕೂರುNext
*