ಲಿಂಗಾಯತ ಧರ್ಮದ ರಸ ಪ್ರಶ್ನೆ ಹಾಗೂ ಉತ್ತರಗಳು

*

ಪ್ರಶ್ನೆ

ಉತ್ತರ

ಬಾಲ ಸಂಗಣ್ಣ ಇವರ ವಚನಾಂಕಿನ ಯಾವುದು? ಕಮಠೇಶ್ವರ ಲಿಂಗ
ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ ಕೊಂಡಾಡಿದವರು ಯಾರು? ಅಕ್ಕಮಹಾದೇವಿ
ಬಸವಣ್ಣನವರು ಸ್ಥಾಪಿಸಿದ ಪೀಠ ಯಾವುದು? ಶೂನ್ಯ ಪೀಠ
ಸುಂಕದ ಬಂಕಣ್ಣ ಇವರ ವಚನಾಂಕಿತ ಯಾವುದು? ಬಂಕೇಶ್ವರ ಲಿಂಗ
ಶರಣ ಮೇಳ ಯಾವಾಗ ಪ್ರಾರಂಭವಾಯಿತು? 1988 (1988)
ಸೌರಾಷ್ಟ್ರ ಸೋಮೇಶ್ವರ ಯಾರ ವಚನಾಂಕಿತ? ಸೊಡ್ಡಳ ಬಾಚರಸ
ಸೌರಾಷ್ಟ್ರದ ಈಗಿನ ಹೆಸರು? ಗುಜರಾತ
ಹೆಂಡದ ಮಾರಯ್ಯನವರ ವಚನಾಂಕಿತ ಯಾವುದು? ಧರ್ಮೇಶ್ವರ ಲಿಂಗ
ಏಕೈಕ ದಲಿತ ವಚನಕಾರ್ತಿ ಯಾರು? ಉರಿಲಿಂಗಪೆದ್ದಿ ಕಾಳವ್ವೆ
ಉರಿಲಿಂಗಪೆದ್ದಗಳರಸ ಇದು ಯಾರ ವಚನಾಂಕಿತ? ಉರಿಲಿಂಗಪೆದ್ದಿ ಕಾಳವ್ವೆ
ಅಮ್ಮಿದೇವಯ್ಯನವರ ಕಾಯಕ ಯಾವುದು? ಹಡಪದ (ಕ್ಷೌರಿಕ)
ಕನ್ನದ ಮಾರಿತಂದೆಯ ಕಾಯಕ ಯಾವುದು? ಶಿವಭಕ್ತರಲ್ಲದವರ ಮನೆಗೆ ಕನ್ನ ಹಾಕುವುದು
ಕಲಕೇತಯ್ಯನವರ ಕಾಯಕ ಯಾವುದು? ಕಿಳ್ಳಿಕೇತರ ಆಟ (ಡೊಂಬರಾಟ) ಪ್ರದರ್ಶನ
ಕಿನ್ನರಿಬ್ರಹ್ಮಯ್ಯನವರ ಪೂರ್ವಾಶ್ರಮದ ಕಾಯಕ ಯಾವುದು? ಅಕ್ಕಸಾಲಿ
ವೀರಗೋಲ್ಲಾಳನ ಕಾಯಕ ಯಾವುದು? ಕುರಿಕಾಯುವುದು
ಕಿನ್ನರಿಬ್ರಹ್ಮಯ್ಯನವರ ಶರಣನಾದ ನಂತರ ಕಾಯಕ ಯಾವುದು? ಕಿನ್ನರಿ ನುಡಿಸುವುದು
ಘಟ್ಟಿವಾಳಯ್ಯಗಳ ಕಾಯಕ ಯಾವುದು? ನರ್ತನ ಮಾಡುವುದು
ಮೋಳಿಗೆಯ ಮಾರಯ್ಯನವರ ಕಾಯಕ ಯಾವುದು? ಕಟ್ಟಗೆ ಕಡಿಯುವುದು
ನಗೆಯ ಮಾರಿತಂದೆಯ ಕಾಯಕ ಯಾವುದು? ಮನರಂಜನೆ ಮಾಡುವುದು
ಜೇಡರ ದಾಸಿಮಯ್ಯನವರ ಕಾಯಕ ಯಾವುದು? ನೇಯ್ಗೆ
ಮರುಳ ಶಂಕರ ದೇವರ ಕಾಯಕ ಯಾವುದು? ಅನುಭವ ಮಂಟಪದಲ್ಲಿ ಮುಸುರೆ ತೆಗೆಯುವುದು
ಮೋಳಿಗೆಯ ಮಾರಯ್ಯನವರ ಐಕ್ಯ ಸ್ಥಾನ ಯಾವುದು? ಮೋಳಕೇರಿ ( ತಾ: ಹುಮನಾಬಾದ)
ಕಲ್ಯಾಣಕ್ಕೆ ಬರುತ್ತಿರುವ ಅಕ್ಕನ ವೈರಾಗ್ಯ ಪರೀಕ್ಷಿಸಿದ ಶರಣ ಯಾರು? ಕಿನ್ನರಿ ಬ್ರಹ್ಮಯ್ಯ
ಕಿನ್ನರಿ ಬ್ರಹ್ಮಯ್ಯ ಹೊಳೆ ಎಲ್ಲಿದೆ? ಉಳವಿ
ಜೇಡರ ದಾಸಿಮಯ್ಯನವರ ಜನ್ಮ ಸ್ಥಳ ಯಾವುದು? ಗುಲಬರ್ಗಾ ಜಿಲ್ಲೆಯ ಮುದನೂರ
ಪ್ರವಚನ ಪಿತಾಮಹ ಯಾರು? ಲಿಂಗಾನಂದ ಸ್ವಾಮಿಗಳು
ಜೇಡರ ದಾಸಿಮಯ್ಯನವರ ಧರ್ಮಪತ್ನಿಯ ಹೆಸರು? ದುಗ್ಗಳೆ
ನಾರಾಯಣಪ್ರಿಯ ರಾಮಾನಾಥ ಇದು ಯಾರ ವಚನಾಂಕಿತ? ಗುಪ್ತ ಮಂಚಣ್ಣ
ಚಿಕ್ಕಯ್ಯಪ್ರಿಯ ಸಿದ್ಧಲಿಂಗಯ ಇದು ಯಾರ ವಚನಾಂಕಿತ? ಘಟ್ಟಿವಾಳಯ್ಯ
ಅಭಿನವ ಮಲ್ಲಿಕಾರ್ಜುನ ಇದು ಯಾರ ವಚನಾಂಕಿತ? ಡೋಹರ ಕಕ್ಕಯ್ಯ
ಮಧುವರಸನವರ ವಚನಾಂಕಿತ ಯಾವುದು? ಅರ್ಕೇಶ್ವರ ಲಿಂಗ
ಮರುಳಶಂಕರ ದೇವರ ವಚನಾಂಕಿತ ಯಾವುದು? ನಿಮ್ಮ ಧರ್ಮ ನಿಮ್ಮ ಧರ್ಮ
ಮಾದಾರ ಚೆನ್ನಯ್ಯ ವಚನಾಂಕಿತ ಯಾವುದು? ಅರಿನಿಜಾತ್ಮರಾಮರಾಮನ
ಮೇದಾರ ಕೇತಯ್ಯ ವಚನಾಂಕಿತ ಯಾವುದು? ಗವರೇಶ್ವರಾ
ಡೋಹಾರ ಕಕ್ಕಯ್ಯನವರ ಲಿಂಗ್ಯಕ್ಯ ಸ್ಥಳ ಯಾವುದು? ಕಕ್ಕೇರಿ
ಸಮಗಾರ ಹರಳಯ್ಯನವರು ವಚನ ರಚಿಸಿದ್ದಾರೆಯೇ? ಇಲ್ಲ
ಬಸವಾದಿ ಶರಣರು ಕೊಟ್ಟ ಸಾಹಿತ್ಯ ಯಾವುದು? ವಚನ ಸಾಹಿತ್ಯ
ಎಲ್ಲಿ ನಿಮ್ಮ ವಡ್ಡರ ಸಿದ್ಧ ಎಂದು ಕೇಳಿದವರು ಯಾರು? ಅಲ್ಲಮಪ್ರಭು
ಲಿಂಗಾಯತ ಎಂದರೇನು? ಇಷ್ಟಲಿಂಗವನ್ನು ಧರಿಸಿಕೊಂಡವನು
ಸಿದ್ಧರಾಮೇಶ್ವರರನ್ನು ಸೋಲಾಪೂರದಿಂದ ಬಂಧಿಸಿ ಕರೆತರಲು ಯಾರು ಆದೇಶ ನೀಡಿದರು? ಕರ್ಣದೇವ
ಆರೋಗಣೆ ಎಂದರೇನು? ಊಟ (ಪ್ರಸಾದ ಸ್ವೀಕಾರ)
ದ್ವೈತ ಎಂದರೇನು? ಎರಡು
ಅದ್ವೈತ ಎಂದರೇನು? ಒಂದೇ ಎರಡಲ್ಲ
ತಾಪತ್ರಯಗಳು ಎಷ್ಟು ವಿಧ? ಮೂರು
ತಾಪತ್ರಯಗಳು ಯಾವವು? ಅಧ್ಯಾತ್ಮಿಕ, ಅಧಿಭೌತಿಕ, ಅಧಿದೈವಿಕ
ಹುಲ್ಲೆ ಎಂದರೇನು? ಜಿಂಕೆ
ಅರ್ತಿ ಎಂದರೇನು? ಪ್ರೀತಿ
ಅಜ ಎಂದರೇನು? ಆಡು ಕುರಿ/ ಬ್ರಹ್ಮ
ಕಾರ್ತಿಕದ ಕತ್ತಲೆಯಲ್ಲಿ ಆಕಾಶದೀಪವಾಗಿ ನೀ ಬಂದೆ 8 ಶತಮಾನಗಳ ಹಿಂದೆ ಈ ರೀತಿ ಬಸವಣ್ಣನ ಕುರಿತು ಹೇಳಿದವರಾರು? ಕುವೆಂಪು
ಅಗ್ಘವಣಿ ಎಂದರೇನು? ಪೂಜೆಯ ನೀರು, ಪವಿತ್ರ ನೀರು
ಪರಿವಿಡಿ (index)
*
Previousರಸ ಪ್ರಶ್ನೆ ಹಾಗೂ ಉತ್ತರಗಳು - 3ರಸ ಪ್ರಶ್ನೆ ಹಾಗೂ ಉತ್ತರಗಳು - 5Next
*