ಪುರುಷನ ಮುಂದೆ ಮಾಯೆ ...........

ಪುರುಷನ ಮುಂದೆ ಮಾಯೆ, ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು

ಪುರುಷನ ಮುಂದೆ ಮಾಯೆ, ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು.
ಸ್ತ್ರೀಯ ಮುಂದೆ ಮಾಯೆ, ಪುರುಷನೆಂಬ ಅಭಿಮಾನವಾಗಿ ಕಾಡುವುದು.
ಲೋಕವೆಂಬ ಮಾಯೆಗೆ ಶರಣಚಾರಿತ್ರ್ಯ, ಮರುಳಾಗಿ ತೋರುವುದು.
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ. - ಅಕ್ಕಮಹಾದೇವಿ.

ಅದುವರೆಗೆ ಸಾಹಿತ್ಯ, ಆಧ್ಯಾತ್ಮ ಕ್ಷೇತ್ರದಲ್ಲಿ ಕೃಷಿ ಮಾಡಿದವರೆಲ್ಲಾ ಗಂಡಸರೇ ಆಗಿದ್ದರು. ಜಗತ್ತನ್ನು ಮಾಯೆ ಎಂದರು. ಹೊನ್ನು, ಮಣ್ಣು ಜೊತೆಗೆ ಹೆಣ್ಣನ್ನೂ ಸೇರಿಸಿ ಮಾಯೆ ಎಂದರು. ಹೆಣ್ಣನ್ನು ಹೊನ್ನು ಮಣ್ಣಂತೆ ಪುರುಷನ ಸ್ವತ್ತು ಆಸ್ತಿ ಎಂಬಂತೆ ಮಾತಾಡಿದರು. ಹೆಣ್ಣಿಗೊಂದು ಅಸ್ಥಿತ್ವ, ಮನಸ್ಸು, ವಿಚಾರ ಸ್ವಾತಂತ್ರ ಇದೆ ಎಂಬುದನ್ನು ಯಾರೂ ಆಲೋಚಿಸಲೇ ಇಲ್ಲ.ಹೊನ್ನು ಕಣ್ಣಳತೆಯಲ್ಲಿ ಹೆಣ್ಣು ತನ್ನ ಉಪಭೋಗದ ವಸ್ತು ಎಂಬಂತೆ ನಡೆದುಕೊಂಡರು.ಹೆಣ್ಣನ್ನು ಆಸ್ತಿಯಂತೆ ಇತರರಿಗೆ ವರ್ಗಾಯಿಸಬಹುದು ಎಂದು ಹೆಣ್ಣನ್ನೂ ವಿಲೇವಾರಿ ಮಾಡಿದರು. ಗಂಡಸು ಎಷ್ಟು ಹೆಣ್ಣನ್ನು ಬೇಕಾದರೂ ಉಪಭೋಗ ಮಾಡಬಹುದು ಎಂದು ತಿಳಿದರು. ಇಂಥಹ ಎಲ್ಲಾ ಆಲೋಚನೆಗಳನ್ನು ಪ್ರಶ್ನಿಸಿ, ಧಿಕ್ಕರಿಸಿ ಪುರುಷನಂತೆ ತನಗೂ ಒಂದು ಅಸ್ತಿತ್ವ, ಸ್ವಾತಂತ್ರ, ಚಿಂತನೆ ಇದೆ ಎಂಬುದನ್ನು ತೋರಿಸಿಕೊಟ್ಟು ಪುರುಷನ ಕಪಿಮುಷ್ಟಿಯಿಂದ ಹೊರಬಂದು ಸ್ತ್ರೀ ಸ್ವಾತಂತ್ರ್ಯ ಕಹಳೆಯೂದಿ ಜಗತ್ತಿನ ಮೊತ್ತಮೊದಲು ಸ್ತ್ರೀ ಸ್ವಾತಂತ್ರ ತಂದುಕೊಟ್ಟ ಮಹಿಳೆ ಅಕ್ಕಮಹಾದೇವಿ.

ಗಂಡು ಹೆಣ್ಣನ್ನು ಮಾಯೆ ಎಂದು ಕರೆದರೆ, ಹೆಣ್ಣಿಗೆ ಗಂಡು ಕೂಡಾ ಮಾಯೆ ಎಂದು ಮೊದಲ ಸಲಕ್ಕೆ ಅಕ್ಕಮಹಾದೇವಿ ನಿರೂಪಿಸಿದರು. 'ಸ್ತ್ರೀ ಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡಿತ್ತು' ನೋಡಾ! ಹೆಣ್ಣಿಗೆ ಗಂಡು ಮಾಯೆಯಾಗಿ ಮಾಡಿದ್ದನ್ನು ಮೊದಲ ಸಲ ಅಭಿವ್ಯಕ್ತಿ ಮಾಡಿ ಜಗತ್ತಿಗೆ ತೋರಿಸಿಕೊಟ್ಟರು. ಅದುವರೆಗೂ ಪುರುಷ ಕಟ್ಟಿದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆಗೆ ಈ ಪುರುಷನ ವಿರುದ್ಧ ಮಾತನಾಡುವ ದನಿ ಕೂಡಾ ಇರಲಿಲ್ಲ. ಈ ಮೊದಲ ಧ್ವನಿ ಅಕ್ಕಮಹಾದೇವಿಯರದು. ಈ ಧ್ವನಿಯಿಂದಲೇ ಪುರುಷನ ಮಾಯೆಯ ಕೋಟೆಯನ್ನು ಒಡೆದು ಧೂಳಿಪಟ ಮಾಡಿದವರು ಮಹಾದೇವಿಯಕ್ಕ. ಅದುವರೆಗೆ ಲಕ್ಷ ಲಕ್ಷ ಮಹಿಳೆಯರ ಕಣ್ಣ ಕಂಬನಿ ಹೊಳೆಯಾಗಿ ಹರಿದು ಹೋದದ್ದು ಯಾರ ಗಮನಕ್ಕೂ ಬಾರದೇ ಹೋಯಿತು.

'ಸತಿಗೆ ಪುರುಷನೇ ದೇವರು, ರಾಜ ಪ್ರತ್ಯಕ್ಷ್ಯ ದೇವತಾಃ' ಎಂಬ ಅನೇಕ ಮೌಲ್ಯಗಳನ್ನು ಮಹಿಳೆಯ ಮೇಲೆ ಧರ್ಮದ ನಿರ್ಬಂಧದಲ್ಲಿ ಹೇರಲಾಗಿತ್ತು. ರಾಜ ಮತ್ತು ಗಂಡ ಈ ಎರಡನ್ನು ಮಹಿಳೆ ಪ್ರಶ್ನಿಸಲೇ ಆಗದ ಮೌಲ್ಯಗಳಾಗಿದ್ದವು. ಇವೆರಡೂ ಒಪ್ಪಿಕೊಳ್ಳಲೇ ಬೇಕಾದ ಒತ್ತಾಯಗಳಾಗಿದ್ದವು. ಇಂತಹ ಒತ್ತಾಯದ ಮೌಲ್ಯಗಳನ್ನು ಧಿಕ್ಕರಿಸುವವರು ಹುಚ್ಚರು ಇಲ್ಲಾ ಮೂರ್ಖರು ಎಂದು ಲೋಕ ಭಾವಿಸಿತ್ತು. ಲೋಕವೆಂಬ ಮಾತೆಗೆ ಅಕ್ಕಮಹಾದೇವಿಯರು ಹೊರಬಂದಿರುವ ವಿಚಿತ್ರವಾಗಿ ತೋರಿತು. ರಾಜ ಪ್ರತ್ಯಕ್ಷ್ಯ ದೇವತಾ, ಈ ಮೌಲ್ಯವೂ ಹುಸಿ, ಸತಿಗೆ ಪತಿಗೆ ದೇವರೂ, ಇದೂ ಸಟೆ ಎಂದು ಎಲ್ಲವನ್ನೂ ಇಕ್ಕಿಮೆಟ್ಟಿದರು. ಸಾಮಾನ್ಯವಾಗಿ ಮಹಿಳೆಗೆ ವಸ್ತ್ರ, ವಸನ, ಆಭರಣ, ಅರಮನೆ, ವೈಭೋಗ ಇವೆಲ್ಲವೂ ಬೇಕು, ಮಹಿಳೆಗೆ ಮಹಿಳೆಗೆ ಇವುಗಳ ಮೇಲೆ ಅತಿ ಆಶೆ. ಅಕ್ಕಮಹಾದೇವಿಯವರು ಇವೆಲ್ಲವನ್ನೂ ಮೆಟ್ಟಿ ನಿಂತು ನಿರಾಕರಿಸಿದರು. ಇವೆಲ್ಲವನ್ನೂ ಕಾಲಕಸವಾಗಿ ಕಂಡರು. ವೀರ ವೈರಾಗ್ಯದಲ್ಲಿ ಬಾಳಿದರು. ದಿಗಂಬರವನ್ನನೇ ಧಿವ್ಯಾಂಬರವನ್ನಾಗಿ ಮಾಡಿ ವೈರಾಗ್ಯ ತೋರಿದ ಧಿವ್ಯ ವಿರಾಗಿಣಿ, ವೈರಾಗ್ಯ ಚಕ್ರವರ್ತಿ ಅಕ್ಕಮಹಾದೇವಿ. ಈ ಚಾರಿತ್ರ್ಯಕ ಲೋಕಕ್ಕೆ ವಿಚಿತ್ರವಾಗಿ ತೋರಿರಬೇಕು.

ಚೆನ್ನಮಲ್ಲಿಕಾರ್ಜುನನೊಲಿದ ಅರಸರಿಗೆ ಮಾಯೆಯಿಲ್ಲ ಮರಗಳಲ್ಲಿ ಅನುಮಾನವು ಇಲ್ಲ. ಇಂಥಹ ಅಮೋಘ ಸತ್ಯವನ್ನು ಅಕ್ಕಮಹಾದೇವಿ ಯವರು ಹೇಳಿದ ರು. ಮಾಯೆ, ಮರಹು, ಅಭಿಮಾನ ಇವು ಮೂರನ್ನೂ ಗೆದ್ದ. ಧೀರೆ ಅಕ್ಕಮಹಾದೇವಿ.

*
Previousಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?ಇಷ್ಟಲಿಂಗ ಜಾತ್ಯತೀತತೆಯ ಕುರುಹುNext
*