ಪ್ರಸಾದ ಸ್ಥಲ

*

..... ...... ....... .......
ಪ್ರಸಾದಿಯೆಂತೆಂಬೆನಯ್ಯಾ? ಆಧಿವ್ಯಾಧಿ ನಷ್ಟವಾಗದನ್ನಕ್ಕ.[1]
..... ...... ....... .......
..... ...... ....... .......
ಕೂಡಲಸಂಗಮದೇವಾ. --ಗುರು ಬಸವಣ್ಣನವರ ವಚನ

ಷಟಸ್ಥಲಗಳಲ್ಲಿ ಮೂರನೇಯದು ಪ್ರಸಾದ ಸ್ಥಲ (ಪ್ರಸಾದಿ ಸ್ಥಲ). ನಿಷ್ಠೆಯನ್ನು ಮೈಗೂಡಿಸಿಕೊಂಡು ಪ್ರಸಾದಿಸ್ಥಲದಲ್ಲಿ ನಿಂದ ಸಾಧಕನು ಅಧಿವ್ಯಾಧಿ ಅಂದರೆ ಮಾನಸಿಕ ಮತ್ತು ದೈಹಿಕ ರೋಗಗಳಿಂದ ಮುಕ್ತನಾಗಿರಬೇಕು. ಮನೋವಿಕಾರವನ್ನು ಕಳೆದುಕೊಳ್ಳದೆ ಮನದಲ್ಲಿ ಲಿಂಗನೆಲೆಗೊಳ್ಳದು, ದೇಹವಿಕಾರವಿದ್ದರೆ ಪ್ರಸಾದ ಕಾಯವಾಗದು. ಒಂದರ್ಥದಲ್ಲಿ ಪ್ರಸಾದಿಯು ನಿಷ್ಕಾಮಕರ್ಮಿಯಾಗಿರುವನು. ಸತತ ಕಾಯಕಜೀವಿಯಾಗಿದ್ದರೂ ಅದಕ್ಕೆ ಅತೀತವಾಗಿರುವ ನಿರ್ಲಿಪ್ತತೆಯನ್ನು ರೂಢಿಸಿಕೊಂಡಿರುವನು. ಅಧಿವ್ಯಾಧಿಗಳಿಂದ ಮುಕ್ತನಾಗದಿದ್ದರೆ ನಿರ್ಲಿಪ್ತತೆ ಸಾಧ್ಯವಾಗುವುದಿಲ್ಲ. ಲಿಂಗತತ್ವದಲ್ಲಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು ಸಾಧಕನಿಂದಾಗದು. ಆದ್ದರಿಂದ ಪ್ರಸಾದಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲನಾಗಬೇಕಾಗಿರುವುದು ಅತ್ಯವಶ್ಯ.

ಲಿಂಗ ಪ್ರಸಾದವ ಲಿಂಗ ನೆನಹಿನಿಂದ ಭೋಗಿಸುವದು, [2]
ಅನರ್ಪಿತವ ಬಿಡುವುದೀಗ ಪ್ರಸಾದಿ ಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ. --ಬಾಲಸಂಗಯ್ಯನ ವಚನ

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
[2] ಪುಸ್ತಕ: ಬಾಲಸಂಗಯ್ಯನ ವಚನಗಳು, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರು: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.


ಪರಿವಿಡಿ (index)
*
Previousಪ್ರಾಣಲಿಂಗಿ ಸ್ಥಲಶರಣ ಸ್ಥಲNext
*