ಮಂತ್ರ

*

ಕರಿಯಂಜುವುದು ಅಂಕುಶಕ್ಕಯ್ಯ ;
ಗಿರಿಯಂಜುವುದು ಕುಲಿಶಕ್ಕಯ್ಯ ;
ತಮಂಧವಂಜುವುದು ಜ್ಯೋತಿಗಯ್ಯ ;
ಕಾನನವಂಜವುದು ಬೇಗೆಗಯ್ಯಾ
ಪಂಚಮಹಾಪಾತಕವಂಜುವುದು
ಕೂಡಲ ಸಂಗನ ನಾಮಕ್ಕಯ್ಯಾ.
--ಬಸವಣ್ಣನವರು

ಆನೆಯು ಬೃಹತ್ ಗಾತ್ರದ ಪ್ರಾಣಿ ಇರಬಹುದು ಅದು ಅಂಕುಶಕ್ಕೆ ಅಂಜುವುದು. ಬೆಟ್ಟವು ಬಲವಾಗಿರಬಹುದು. ಆದರೂ ಅದು ಉಳಿ-ಸುತ್ತಿಗೆಗೆ ಅಂಜುವುದು. ಕತ್ತಲೆ ಬಹಳವಿರಬಹುದು ಆದರೂ ಅದು ಜ್ಯೋತಿಗೆ ಹೆದರುವುದು. ಕಾಡು ಬಹಳ ವಿಸ್ತಾರವಾಗಿರಬಹುದು ಆದರೂ ಅದು ಕಿಚ್ಚಿಗೆ ಮಣಿಯುವುದು. ಪಾಪ-ಪಾತಕಗಳು ಎಷ್ಟೇ ಇರಬಹುದು ಅವು ಕೂಡಲ ಸಂಗಮದೇವರ ಪವಿತ್ರ ನಾಮಕ್ಕೆ ಹೆದರಿ ಓಡುತ್ತವೆ.

ವಶ್ಯವ ಬಲ್ಲೆವೆಂದೆಬಿರಯ್ಯಾ-
ಬುದ್ದಿಯನರಿಯದ ಮನುಜರು ಕೇಳಿರಯ್ಯಾ ವಶ್ಯವಾವುದೆಂದರಿಯದೆ,
ಮರಳುಗೊಂಬಿರೆಲೆ ಗಾವಿಲ ಮನುಜರಿರಾ !
"ಓಂ ನಮಃ ಶಿವಾಯ" ಎಂಬ ಮಂತ್ರ ಸರ್ವ ಜನವಶ್ಯ ಕೂಡಲ ಸಂಗಮದೇವಾ.
-- ಬಸವಣ್ಣನವರು

ವಶೀಕರಣ ವಶೀಕರಣ ಎಂದು ಬಡಬಡಿಸುವ ಜನರೇ ಕೇಳಿರಿ ಇನ್ನೂಬ್ಬರನ್ನು ವಶಮಾಡಿಕೊಳ್ಳಲು ಯಾರು ಯಾರ ಬಳಗೋ ಹೋಗಿ ಮಂತ್ರ ಹಾಕಲು ಕೇಳುವಿರಿ. ಮೂಢ ಜನರು ನೀವು. "ಓಂ ನಮಃ ಶಿವಾಯ"/ಓಂ ಲಿಂಗಾಯ ನಮಃ ಜಪಿಸುತ್ತ ಹೋಗಿರಿ. ಎಲ್ಲವೂ ವಶವಾಗುವುದು ಎಲ್ಲರೂ ನಿಮ್ಮ ಮಾತು ಕೇಳುತ್ತಾರೆ. ನಿಮಗೆ ಬೇಕಾದುದು ತಾನಾಗಿಯೇ ಸಿದ್ದಿಯಾಗುತ್ತದೆ.

ಪರಿವಿಡಿ (index)
*
Previousರುದ್ರಾಕ್ಷಿಪಾದೋದಕNext
*