ಲಿಂಗಾಯತ ಸಮಾಜದ ಮೇಲೆ ೧೮೯೧ರ ಮೈಸೂರು ವೀರಶೈವ ಆರಾಧ್ಯರ ಆಂದೋಲನದ ದೀರ್ಘಾವಧಿ ದುಷ್ಪರಿಣಾಮಗಳು.

*

✍ ಎಸ್.ಎಂ. ಜಾಮದಾರ.
ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ,
ನಿವೃತ ಐ.ಎ.ಎಸ್‌ ಅಧಿಕಾರಿ.

ಇಂಗ್ಲೀಷ್ ಮೂಲ : ಡಾ. ಎಸ್ ಎಮ್. ಜಾಮದಾರ., ಕನ್ನಡಕ್ಕೆ : ಡಾ. ಜೆ. ಎಸ್. ಪಾಟೀಲ.

೧೮೯೧ ರಲ್ಲಿನ ಸಾಮಾಜೊ-ಸಾಂಸ್ಕೃತಿಕ ಸನ್ನಿವೇಶ ಮತ್ತು ಅಂತಹ ಬೇಡಿಕೆಗಳಿಗೆ ಕಾರಣವಾಗುವ ಬಲವಂತಗಳು ಏನೇ ಇರಲಿ, ಜಗತ್ತು ಬಹುಮುಖ್ಯವಾಗಿ ಗುರುತಿಸುವ ತಮ್ಮ ಸ್ವಂತ ಧರ್ಮದ ಉದಾತ್ ಸಿದ್ಧಾಂತಗಳನ್ನು ಮತ್ತು ಅದರ ರಕ್ತಸಿಕ್ತ ಇತಿಹಾಸವನ್ನು ಸಂಪೂರ್ಣವಾಗಿ ಹಿಮ್ಮುಖಗೊಳಿಸುವ ಮಟ್ಟಕ್ಕೆ ಅಂದಿನ ಮೈಸೂರು ಭಾಗದ ವೀರಶೈವ/ಲಿಂಗಾಯತರು ಹೋದದ್ದು ವಿಚಿತ್ರ ಮತ್ತು ವಿಪರ್ಯಾಸದ ಸಂಗತಿಯಾಗಿದೆ.

೧೮೯೧ ರಂದು ಮೈಸೂರಿನಲ್ಲಿ ನಡೆದದ್ದೆಲ್ಲವೂ ಬಹಳ ಹಳೆಯ ಇತಿಹಾಸವೇನಲ್ಲ. ಆದರೆ ಅದು ನಡೆದದ್ದು ಕೇವಲ ೧೩೦ ವರ್ಷಗಳ ಹಿಂದೆ. ಜನರ ನೆನಪು ಕ್ಷಣಿಕವಾದದ್ದು (ನಮ್ಮ ರಾಜಕಾರಣಿಗಳಿಗೆ ಇದು ಚೆನ್ನಾಗಿ ಗೊತ್ತು). ೧೮೯೧ ರಲ್ಲಿ ಮೈಸೂರಿನಲ್ಲಿ ನಡೆದದ್ದನ್ನೆಲ್ಲ ಜನರು ಈಗ ಮರೆತಿದ್ದಾರೆ.

ಮೈಸೂರಿನ ವೀರಶೈವರ ೧೮೯೧ ರ ಪ್ರತಿಭಟನೆಯ ಬಗ್ಗೆ ಇಂದಿನ ತಲೆಮಾರಿನ ಜನರಿಗೆ ತಿಳಿದಿಲ್ಲ. ಅಷ್ಟೇ ಏಕೆˌ ಈ ವೀರಶೈವರನ್ನು ಲಿಂಗಿ ಬ್ರಾಹ್ಮಣರೆಂದು ಗುರುತಿಸಲಾಗುವ ಸಂಗತಿಯೂ ಹಲವಾರು ಲಿಂಗಾಯತ ಧರ್ಮಿಯರಿಗೆ ಇಂದಿಗೂ ಗೊತ್ತಿಲ್ಲ.

ತಮ್ಮದು ಆಗಮಿಕ ವೀರಶೈವ ಧರ್ಮ ಎಂದು ಪ್ರತಿಪಾದಿಸುವ ಪಂಚಪೀಠದ ಜಗದ್ಗುರುಗಳು ಅಪ್ಪಿತಪ್ಪಿಯೂ ತಾವು ಲಿಂಗಿ ಬ್ರಾಹ್ಮಣ ಸ್ಥಾನಮಾನದ ಬೇಡಿಕೆಯನ್ನು ಬೆಂಬಲಿಸಿದ ಅಂಶ ಎಲ್ಲಿಯೂ ಉಲ್ಲೇಖಿಸುವುದಿಲ್ಲ. ಅಂದು ವೀರಶೈವ ಆಂದೋಲನಕಾರರ ಮುಖವಾಣಿಯಾಗಿದ್ದ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆ, ಇಂದಿಗೂ ಅದು ಕೇವಲ ಮೈಸೂರಿಗೆ ಸೀಮಿತವಾಗಿ ಸಕ್ರಿಯವಾಗಿದೆ.

ಅದರೆ ಈ ಪತ್ರಿಕೆಯು ಎಂದಿಗೂ ಲಿಂಗಾಯತರ ಒಡೆತನದ ಅಥವಾ ನಿಯಂತ್ರಣಕ್ಕೆ ಒಳಪಡಲಿಲ್ಲ. ಈಗ ಈ ಪತ್ರಿಕೆಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಆದರೆ ಈ ಪತ್ರಿಕೆಯಲ್ಲಿ ಪ್ರಕಟವಾದ ದಾಖಲೆಗಳು ಈ ಪತ್ರಿಕೆ ವೀರಶೈವರ ಆಂದೋಲನವನ್ನು ಬೆಂಬಲಿಸಿದ್ದ ಬಗ್ಗೆ ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದೆ (ಬೋರಟ್ಟಿ 2020).

ವೀರಶೈವರ ಆ ಆಂದೋಲನವನ್ನು ಪ್ರಬಲವಾಗಿ ಬೆಂಬಲಿಸಿದ ಮತ್ತೊಂದು ಅಕ್ಷರ ಶಕ್ತಿ ಎಂದರೆ ಮಹಾರಾಷ್ಟ್ರದ ಶ್ರೀಮಂತ ಮತ್ತು ಖ್ಯಾತ ಕೈಗಾರಿಕೋದ್ಯಮಿ ಲಿಂಗೈಕ್ಯ ವಾರದ ಮಲ್ಲಪ್ಪರಿಂದ ಪ್ರಾಯೋಜಿಸಲಾಗುತ್ತಿದ್ದ ಸೋಲಾಪುರದ " ದಿ ಲಿಂಗಿ ಬ್ರಾಹ್ಮಿಣ್ ಗ್ರಂಥಮಾಲೆ."

೧೮೭೯ ರಿಂದ ೧೯೧೦ ರ ಅವಧಿಯಲ್ಲಿ ಈ ಗ್ರಂಥಮಾಲೆಯು ವೀರಶೈರ ಪರ ಮತ್ತು ಲಿಂಗಾಯತ ವಿರೋಧಿ ನಿಲುವುಳ್ಳ ಸುಮಾರು 62 ಖೊಟ್ಟಿ ಗ್ರಂಥಗಳನ್ನು ಸಂಸ್ಕೃತ ಮತ್ತು ಮರಾಠಿಯಲ್ಲಿ ಪ್ರಕಟಿಸಿದೆ (ಪ್ರಕಾಶ್ ಗಿರಿಮಲ್ಲನವ…). ಈಗ ಈ ಗ್ರಂಥಮಾಲೆಯು ಸಂಪೂರ್ಣವಾಗಿ ಮುಚ್ಚಿಹೋಗಿದೆ ಮತ್ತು ಅದು ಪ್ರಕಟಿಸಿದ ಎಲ್ಲ ಪುಸ್ತಕಗಳು ಈಗ ಜನರ ನೆನಪಿನಿಂದ ಕಣ್ಮರೆಯಾಗಿವೆ.

*
ಪರಿವಿಡಿ (index)
Previousವೀರಶೈವ ಬೇಡ ಲಿಂಗಾಯತ ಇರಲಿಇಕ್ಷುದಂಡಕ್ಕೆ ಕೀಳು ಮೇಲಲ್ಲದೆ . . .Next
*