ಬಸವ ಸಮಿತಿ ಬೆಂಗಳೂರು

*

ಬಸವ ಸಮಿತಿ ಪ್ರಾರಂಭ, ಬೆಳವಣಿಗೆ ಹಾಗೂ ಕಾರ್ಯಕ್ರಮಗಳು

೧. ಪ್ರಾರಂಭ:

ಬಸವ ಸಮಿತಿಯು ೧೯೬೪ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, ೧೨ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ ೧೯೬೪ರಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ.

ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ.

ಬಸವ (ಲಿಂಗಾಯತ) ತತ್ವ ವನ್ನು ಮಹಾವೀರ, ಬುದ್ಧ, ಕ್ರಿಸ್ತ, ಶಂಕರ, ರಾಮಾನುಜ, ಮಾಧವ, ನಾನಕ್, ಗಾಂಧಿ ಮತ್ತು ಇತರೆ ಮಹಾನುಭಾವರ ತತ್ವಗಳೊಂದಿಗೆ ತುಲನಾತ್ಮಕ ಅಧ್ಯಯನ ಮಾಡಲು ಪ್ರೇರೆಪಿಸುತ್ತೆವೆ. ಇದಲ್ಲದೆ ಬಸವಣ್ಣನವರ ಮತ್ತು ಅವರ ಸಮಕಾಲೀನ ಶರಣರ ಬಗ್ಗೆ ಸಂಶೋಧನೆ ಮಾಡಿ ಶರಣರ ಜೀವನ ಚರಿತ್ರೆಗಳನ್ನು ಒದಗಿಸಿ ಕೊಟ್ಟಲ್ಲಿ ಅವುಗಳನ್ನು ಕನ್ನಡ, ಆಂಗ್ಲ ಹಾಗೂ ಭಾರತದ ಇತರ ಭಾಷೆಗಳಲ್ಲಿ ಪ್ರಕಟಿಸುತ್ತೇವೆ.

೨. ಬಸವ ಸಮಿತಿಯ ಪ್ರಗತಿ ಪಥ

ಬಸವ ಸಮಿತಿಯ ಪ್ರಾರಂಭವಾದಾಗಿನಿಂದ ತ್ವರಿತಗತಿಯ ಬೆಳವಣಿಗೆಯನ್ನು ಹೊಂದಿದೆ. ಇದರ ಪ್ರಮುಖ ಘಟನಾವಳಿಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗಿದೆ:

(೧) ಪಾದಯಾತ್ರೆ ಹಂಪಿಯಿಂದ ಬಸವ ಕಲ್ಯಾಣದ ವರೆಗೆ ದಿನಾಂಕ ೧ನೇ ಎಪ್ರಿಲ ೧೯೬೬ರಿಂದ ೨೪ನೇ ಎಪ್ರಿಲ ೧೯೬೬

ಬಸವ ಸಮಿತಿಯು ಐತಿಹಾಸಿಕ ಪಾದಯಾತ್ರೆಯನ್ನು ಹಂಪಿಯಿಂದ(ವಿಜಯನಗರ) ದಿನಾಂಕ ೦೧-೦೪-೧೯೬೬ರಂದು ಹಮ್ಮಿಕೊಂಡಿತ್ತು. ಪಾದಯಾತ್ರೆಗೂ ಮುಂಚೆ ಅಂದಿನ ಮೈಸೂರು ರಾಜ್ಯದ ಮುಖ್ಯ ಮಂತ್ರಿಯಾದ ಶ್ರೀ ಎಸ್. ನಿಜಲಿಂಗಪ್ಪ ಅವರು "ಶ್ರೀ ಪ್ರೌಢದೇವರಾಯ ಮಂಟಪ"ದ ಅಡಿಗಲ್ಲು ಸ್ಥಾಪನೆ ಮಾಡಿದರು. ಈ ಅಡಿಗಲ್ಲು ಸಮಾರಂಭದ ಸಾನಿಧ್ಯವನ್ನು ಚಿತ್ರದುರ್ಗದ ಪೂಜ್ಯ ಶ್ರೀ ಜಗದ್ಗುರುಗಳು ವಹಿಸಿಕೊಂಡಿದ್ದರು. ಸಭಾಧ್ಯಕ್ಷರಾದ ಶ್ರೀ ಜತ್ತಿ ಯವರು ಪಾದಯಾತ್ರಿಗಳಿಗೆ ಶುಭಕೋರಿ ಬೀಳ್ಕೊಟ್ಟರು.

ಪಾದಯಾತ್ರಿಗಳ ನೇತೃತ್ವವನ್ನು ಸರ್ಪ ಭೂಷಣಮಠದ ಶ್ರೀ. ಶ್ರೀ. ಶಿವಕುಮಾರ ಸ್ವಾಮಿಗಳು ಹಾಗೂ ಶ್ರೀ ವಿಶ್ವನಾಥ ರೆಡ್ಡಿ ಮುದ್ನಾಳ ಅವರು ವಹಿಸಿಕೊಂಡಿದ್ದರು.

ಪಾದಯಾತ್ರಿಗಳಗೆ ಬಸವಕಲ್ಯಾಣದಲ್ಲಿ ಭವ್ಯ ಸ್ವಾಗತದಿಂದ ಬರಮಾಡಿಕೊಳ್ಳಲಾಯಿತು. ಸಾವಿರಾರು ಹಳ್ಳಿಜನ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿದಿನ ಪೂಜ್ಯರ ಪ್ರವಚನ, ಭಜನೆಗಳು, ಲಾವಣಿ ಪದ್ಯಗಳು ಸಂಗೀತ ಮತ್ತು ಜಾನಪದ ಹಾಡುಗಳನ್ನು ಅಯೋಜಿಸಲಾಗಿತ್ತು. ಈ ಯಾತ್ರೆಯು ಉದ್ದಕ್ಕು ಹಳ್ಳಿಯ ಜನರು ತುಂಬಾ ಉತ್ಸಾಹದಿಂದ ಹಾಗೂ ಸಂತೋಷದಿಂದ ಪಾಲ್ಗೊಂಡರು.

ಈ ಪಾದಯಾತ್ರೆಯು ಸುಮಾರು ೩೦೦ ಮೈಲನ್ನು ೨೪ ದಿವಸಗಳಲ್ಲಿ ಕ್ರಮಿಸಿ, ಬಸವಕಲ್ಯಾಣವನ್ನು ದಿನಾಂಕ ೨೪ನೆ ಎಪ್ರಿಲ ೧೯೯೬ರಂದು ಮುಟ್ಟಿತು. ಈ ಯಾತ್ರೆಯಲ್ಲಿ ಶ್ರೀ ಬಿ.ಡಿ. ಜತ್ತಿ ಮತ್ತು ಶ್ರೀ ಅನ್ನದಾನಯ್ಯ ಪುರಾಣಿಕ ಹಾಗೂ ಇತರ ಬಸವ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ಈ ಯಾತ್ರೆಗೆ ಜನರು ತುಂಬು ಹೃದಯದಿಂದ ಕಾಣಿಕೆಗಳನ್ನು ನೀಡಿದಲ್ಲದೆ ನೂರಾರು ಜನ ಬಸವ ಸಮಿತಿಯ ಸದಸ್ಯರಾದರು, ಸದಸ್ಯತ್ವ ಶುಲ್ಕ ಹಾಗೂ ಕಾಣಿಕೆಯಾಗಿ ಒಟ್ಟು ೧,೫೯,೩೮೧ ರೂಪಾಯಿ ಸಂಗ್ರಹವಾಯಿತು. ಇದು ಒಂದು ವಿಶಿಷ್ಟ ಮತ್ತು ಸಾಟಿಯಿಲ್ಲದ ಕಾರ್ಯಕ್ರಮವಾಗಿ ಇತಿಹಾಸ ರಚಿಸಿತು.

(೨). ಶ್ರೀ ಬಸವೇಶ್ವರರ ೮ನೇ ಶತಮಾನೋತ್ಸವ ಆಚರಣೆ (೨೬ ಡಿಸೆಂಬರ್ ೧೯೬೭ ರಿಂದ ೩೧ ಡಿಸೆಂಬರ್ ೧೯೬೮)

ಕರ್ನಾಟಕ ರಾಜ್ಯ ಸರ್ಕಾರ ಮತ್ತು ಬಸವ ಸಮಿತಿಯ ನೇತ್ರತ್ವದಲ್ಲಿ ಶ್ರೀ ಬಸವೇಶ್ವರರ ೮ನೇ ಶತಮಾನೋತ್ಸವ ಆಚರಣೆಯನ್ನು ದಿನಾಂಕ ೨೬ನೇ ಡಿಸೆಂಬರ ೧೯೬೭ರಿಂದ ೩೧ನೇ ಡಿಸೆಂಬರ ೧೯೬೮ರವರೆಗೆ ಅತಿ ವಿಜ್ರಂಭಣೆಯಿಂದ ಆಚರಿಸಲ್ಪಟ್ಟಿತು, ಇದು ಅತ್ಯಂತ ವೈಭವಯುತವಾಗಿ ಮೂಡಿಬಂದಿತು. ಈ ಆಚರಣೆಯಲ್ಲಿ ಭಾರತದ ಅಧ್ಯಕ್ಷರಿಂದ ಹಿಡಿದು ರೈತಾಪಿ ಜನಗಳ ವರೆಗೆ ವಿವಿಧ ಧರ್ಮಗಳ ಜನತೆ ಒಂದುಗೂಡಿ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಿದರು.

(೩) ಬಸವ ಭವನ ಮತ್ತು ಅನುಭವ ಮಂಟಪದ ಸ್ಥಾಪನೆ.

ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರಿನ ಹೈ ಗ್ರೌಂಡ್ಸ ಹತ್ತಿರ ವಿರುವ 4299 ಚದರ ಗಜ ಅಳತೆಯ ನಿವೇಶನವನ್ನು ಬಸವ ಸಮಿತಿಗೆ ೯೯ ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ನೀಡಿತು. ಈ ನಿವೇಶನಕ್ಕಾಗಿ ನಾವು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ನಿವೇಶನದಲ್ಲಿ ಸುಮಾರು ೧೦ ಲಕ್ಷ ರೂಪಾಯಿ ವೆಚ್ಚದಲ್ಲಿ ಬಸವ ಭವನ ವನ್ನು ನಿರ್ಮಾಣ ಮಾಡಲಾಯಿತು. ಈ ಭವನವು ೧೯೭೧ಕ್ಕೆ ಪೂರ್ಣಗೊಂಡಿತು. ಈ ಭವನ ನಿರ್ಮಾಣಕ್ಕೆ ಸುಮಾರು ೨ ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ಸಂಗ್ರಹಿಸಲಾಯಿತು ಚಿತ್ರದುರ್ಗದ ಬೃಹನಮಠದ ಪೂಜ್ಯ ಶ್ರೀ ಜಗದ್ಗುರುಗಳು ೨೫,೦೦೦/- ರೂ. ಗಳನ್ನು ಕಾಣಿಕೆಯಾಗಿ ಕೊಟ್ಟರು ಅವರಿಗೆ ಹಾಗು ಇತರೆ ಧರ್ಮದಾತರಿಗೆ ನಾವು ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಕಟ್ಟಡದ ಸಲವಾಗಿ ಮಾಡಿರುವ ಸಾಲವನ್ನು ತೀರಿಸುವ ಉದ್ದೇಶದಿಂದ ೩ ಮಹಡಿಗಳನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟು ಬಸವ ಸಮಿತಿಯ ಕಛೇರಿಯನ್ನು ನೆಲಮಹಡಿಗೆ ಸೀಮಿತಗೊಳಿಸಲಾಯಿತು. ೧೯೮೮ರಲ್ಲಿ ಇನ್ನೇರಡು ಮಹಡಿಗಳನ್ನು ಸುಮಾರು ೨೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಯಿತು. ಈಗ ೬ ಅಂತಸ್ತಿನ "ಷಟಸ್ಥಲ ಭವನ" ವು ಈ ಪ್ರದೇಶದ ಸೌಂದರ್ಯವನ್ನು ಹಚ್ಚುವಂತೆ ಮಾಡಿದೆ.

ಬಸವ ಸಮಿತಿ, ಬಸವ ಭವನ,
ಶ್ರೀ ಬಸವೇಶ್ವರ ವೃತ್ತ,
ಬೆಂಗಳೂರು- ೫೬೦ ೦೦೧.
ದೂರವಾಣಿ: ೦೮೦-೨೨೨೬೫೫೦೫, ೦೮೦-೨೨೨೫೯೪೦೦
ಫ್ಯಾಕ್ಸ್: ೦೮೦-೨೨೩೫೫೯೫೩
ಮಿಂಚಂಚೆ: info@basavasamithi.org

ಪರಿವಿಡಿ (index)
*
Previousಗುರು ಬಸವಣ್ಣನವರು ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ.ಶಾಸನಗಳಲ್ಲಿ ಬಸವಣ್ಣNext
*